ಚಿಲುಗೋಡು ಗ್ರಾಮದ ಹತ್ತಿರ ಸರ್ಕಾರಿ ಪ್ರೌಢಶಾಲೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಕೆ.ನೇಮಿರಾಜ ನಾಯ್ಕ ಉದ್ಘಾಟಿಸಿದರು. ಅಕ್ಷರ ದಾಸೋಹ ತಾಲೂಕು ಅಧಿಕಾರಿ ರಾಜಕುಮಾರ ನಾಯ್ಕ, ಎಎಸ್ಡಿಎಂಸಿ ಅಧ್ಯಕ್ಷ ಕರಿಯಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಉಲವತ್ತಿ ಪ್ರಾಕೃಪಸ ಸಂಘದ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ ಇತರರಿದ್ದರು.
- ಶಾಸಕ ಕೆ.ನೇಮಿರಾಜ ನಾಯ್ಕ ಅನಿಸಿಕೆ
- ಹಗರಿಬೊಮ್ಮನಹಳ್ಳಿ ಚಿಲುಗೋಡು ಪ್ರೌಢಶಾಲೆ ಉದ್ಘಾಟನ
ಹಗರಿಬೊಮ್ಮನಹಳ್ಳಿ: ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ಹೊಣೆ ಶಿಕ್ಷಕರದ್ದಾಗಿದ್ದು, ಶಿಕ್ಷಣಕ್ಕೆ ಪೂರಕ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ನಮ್ಮದು ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.
ತಾಲೂಕಿನ ಚಿಲುಗೋಡು ಹೊರ ವಲಯದಲ್ಲಿ ನಿರ್ಮಿಸಿದ 1.61ಕೋಟಿ ರೂ. ವೆಚ್ಚದ ಸರ್ಕಾರಿ ಪ್ರೌಢಶಾಲೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಕಸಿದುಕೊಳ್ಳುವ ಆಸ್ತಿಯಲ್ಲ. ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣವನ್ನು ನೀಡಿ. ಮಹಿಳೆಯರ ಪ್ರಗತಿಗಾಗಿ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮಿಸಲಾತಿ ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದಾರೆ. ಚಿಲುಗೋಡು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಪ್ರಮುಖ ರಸ್ತೆ, ಸಿಸಿ ರಸ್ತೆ, ಕರಿಯಮ್ಮ ದೇಗುಲ ಮತ್ತು ಕಲ್ಲೇಶ್ವರ ದೇಗುಲ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದರು.
ಮುಖ್ಯಶಿಕ್ಷಕಿ ಎಚ್.ಜಿ.ಎಂ.ಲಲಿತಮ್ಮ ಕೇದಾರಸ್ವಾಮಿ, ಅಕ್ಷರ ದಾಸೋಹ ತಾಲೂಕು ಅಧಿಕಾರಿ ರಾಜಕುಮಾರ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಕರಿಯಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಉಲವತ್ತಿ ಪ್ರಾಕೃಪಸ ಸಂಘದ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ, ಪ್ರಮುಖರಾದ ಏಣಿಗಿ ಬುಳ್ಳಪ್ಪ, ಹನುಮಂತಪ್ಪ, ನಂದಿಬಂಡಿ ಕರಿಯಪ್ಪ, ಮಧುಸೂದನ್, ಬಿ.ಎಸ್.ಮೈಲಪ್ಪ, ಜಿ.ಭೀಮಪ್ಪ ಇದ್ದರು.