ಹೊಸಪೇಟೆಯ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿನ ಡಾರ್ಮೆಟರಿಯನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ, ಪರಿಶೀಲಿಸಿದರು. ಡಿಎಚ್‌ಒ ಡಾ.ಎಲ್.ಆರ್.ಶಂಕರ್ ನಾಯ್ಕ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ ಇತರರಿದ್ದರು. 
ವಿಜಯನಗರ

ಡಾರ್ಮೆಟರಿ ನಿರ್ವಹಣೆ ಸರಿಯಾಗಿರಲಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ
ಹೊಸಪೇಟೆ: ಆಸ್ಪತ್ರೆ ಆವರಣದಲ್ಲಿನ ಡಾರ್ಮೆಟರಿಯನ್ನು ಸಪರ್ಮಕ ನಿರ್ವಹಣೆಯೊಂದಿಗೆ ಸಾರ್ವಜನಿಕರಿಗೆ ಉಪಯೋಗಕ್ಕೆ ಬರಲಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗಿರುವ ವಸತಿ ನಿಲಯದಲ್ಲಿ (ಡಾರ್ಮೆಟರಿ)ಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದರು.
ಬರುವವರ ಗರ್ಭಿಣಿ ಬಾಣಂತಿಯರ ಪೊಷಕರಿಗೆ ಕ್ಷೇಮವಾಗಿ ತಂಗಲು ಉಚಿತವಾಗಿ ಉಳಿದುಕೊಳ್ಳಲು ಸುಸಜ್ಜಿತ ಕಾಟ್-ಬೆಡ್, ಶೌಚಾಲಯ, ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಡಾರ್ಮೆಟರಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಹುತೇಕ ಹೊರಗಿ ಜನರು ಹೆಚ್ಚಾಗಿ ಬರುತ್ತಾರೆ. ಆದ್ದರಿಂದ ರೋಗಿಗಳ ಜತೆ ಬರುವ ಸಂಬAಧಿಕರಿಗೆ ಡಾರ್ಮೆಂಟರಿ ಉಪಯೋಗಕ್ಕೆ ಬರಲಿದೆ. ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ನಿರ್ವಹಣೆ ಆಗಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.