ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಗುವಿಗೆ ಶಾಸಕ ಕೆ.ನೇಮಿರಾಜ್ ನಾಯ್ಕ ಲಸಿಕಿ ಹಾಕಿದರು.  
ವಿಜಯನಗರ

ಜೀವನಪೂರ್ತಿ ಕಷ್ಟ ಪಡದಿರಿ

ಅಶೋಕ್ ಕುಮಾರ್ ಎನ್
ಹಗರಿಬೊಮ್ಮನಹಳ್ಳಿ: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಜೀವನ ಪೂರ್ತಿ ಕಷ್ಟ ಪಡಬೇಕಾಗುತ್ತದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ಗಂಗಾವತಿ ವೆಂಕೋಬಣ್ಣನವರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಎರಡು ಹನಿ ಲಸಿಕೆ ಜೀವನ ಕಾಪಾಡುತ್ತದೆ. ದೇಶದಲ್ಲಿ ಮತ್ತೆ ಪೋಲಿಯೋ ಸೋಂಕು ಕಾಣಿಸಿಕೊಳ್ಳದಿರಲಿ ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಪ್ರವೀಣ್ ಮಾತನಾಡಿ, ತಾಲೂಕಿನಲ್ಲಿ 22,160 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಕಳೆದ ಬಾರಿ ಅಭಿಯಾನ ಶೇ.99 ಯಶಸ್ವಿಯಾಗಿತ್ತು. ಈ ವರ್ಷ ಶೇ100 ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಉಪತಹಸೀಲ್ದಾರ್ ಶಿವಕುಮಾರಗೌಡ್ರು, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನಾಗನಗೌಡ್ರು, ಡಾ.ತಿಪ್ಪೇಸ್ವಾಮಿ, ಇಲಾಖೆ ಕಾರ್ಯಕ್ರಮಗಳ ಯೋಜನಾಧಿಕಾರಿ ಯಮನಮ್ಮ, ಉದ್ಯೋಗಖಾತ್ರಿ ಯೋಜನಾಧಿಕಾರಿ ರಮೇಶ ಮಹಾಲಿಂಗಪುರ, ಹಿರಿಯ ಮೇಲ್ವಿಚಾರಕಿ ನಾಗರತ್ನ ರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಹೋಟೆಲ್ ಸಿದ್ದರಾಜು, ಬ್ಯಾಟಿ ನಾಗರಾಜ ಇತರರಿದ್ದರು.