ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ಮಕ್ಕಳು ಈ ದೇಶದ ಆಸ್ತಿ. ಪೋಷಕರಿಗೆ ಬೇಡವಾದ ಅಥವಾ ಅನಾಥ ಮಕ್ಕಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗದೆ, ಸರ್ಕಾರದ ವಿಶೇಷ ದತ್ತು ಸಂಸ್ಥೆಗೆ ಹಸ್ತಾಂತರಿಸಿ ಅವರ ಸುಭದ್ರ ಭವಿಷ್ಯಕ್ಕೆ ಸಹಕರಿಸಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಇಬ್ಬರು ಮಕ್ಕಳಿಗೆ ದತ್ತು ಪರ್ವ ಪೋಷಕತ್ವದ ಆದೇಶ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ 2024 ಅಕ್ಟೋಬರ್ನಿಂದ ಆರಂಭವಾದ ಈ ಸಂಸ್ಥೆಯು ಈ ವರೆಗೆ 7 ಮಕ್ಕಳಿಗೆ ಕಾನೂನಾತ್ಮಕವಾಗಿ ದತ್ತು ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗಿದೆ. ಮರ್ಗಸೂಚಿಯನ್ವಯ ಮಂಡ್ಯ ಹಾಗೂ ಹೊನ್ನಾವರದ ದಂಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಇಬ್ಬರು ಮಕ್ಕಳನ್ನು ದತ್ತು ಹಸ್ತಾಂತರಿಸಿದ ಅವರು, ಸಂಸ್ಥೆಯಲ್ಲಿರುವ ಮಕ್ಕಳ ಪಾಲನೆ ಮತ್ತು ಪೋಷಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಿಬ್ಬಂದಿಗಳಿಗೆ ನರ್ದೇಶನ ನೀಡಿದರು.
ಪರಿತ್ಯಕ್ತ ಅಥವಾ ಅನಾಥ ಮಕ್ಕಳು ಕಂಡುಬAದಲ್ಲಿ ಕೂಡಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸರ್ಕಿಸಿ ಮಾಹಿತಿ ನೀಡಬೇಕು. ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ಪಡೆಯುವ ಮೂಲಕ ಅವರಿಗೆ ಸುಂದರ ಬದುಕು ನೀಡಿ ಎಂದು ತಿಳಿಸಿದರು.