ಕಮಲಾಪುರ ಕೆರೆಯ ಮೇಲೆ ಮಹಿಳಾ ಮೀನುಗಾರರು ವಿಹಾರ ಬೋಟ್ ಇಳಿಸದಂತೆ ಪ್ರತಿಭಟನೆ ನಡೆಸಿದರು. ಮನ್ನಮ್ಮ, ಲಕ್ಷಿö್ಮ, ಭಾಗ್ಯ, ದುರಗಮ್ಮ ಇತರರಿದ್ದರು. 
ವಿಜಯನಗರ

ದೋಣಿ ವಿಹಾರ ಮಾಡಬೇಡಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಕಮಲಾಪುರ ಕೆರೆ ಮೇಲೆ ಹವಾಮದ ವಿರುದ್ಧ ಪ್ರತಿಭಟನೆ ನಡೆಸಿದ ಮೀನುಗಾರರು
ಹೊಸಪೇಟೆ: ತಾಲೂಕಿನ ಕಮಲಾಪುರ ಐತಿಹಾಸಿಕ ಕೆರೆಯಲ್ಲಿ ಶಾಶ್ವತ ದೋಣಿ ವಿಹಾರಕ್ಕೆ ಸಿದ್ದತೆ ನಡೆಸಿರುವ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ(ಹವಾಮ)ದ ವಿರುದ್ಧ ಮೀನುಗಾರರಿಂದ ಶನಿವಾರ ಪ್ರತಿಭಟನೆ ನಡೆಯಿತು.
ಪ್ರವಾಸಿ ತಾಣಗಳಲ್ಲಿ ಕಮಲಾಪುರ ಕೆರೆ ಕೂಡ ಒಂದಾಗಿದೆ. ಇನಷ್ಟು ಆಕರ್ಷಣೆಗೆ ಕಾಯಂ ದೋಣಿ ವಿಹಾರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಂಪಿ ಉತ್ಸವದಲ್ಲಿ ಮಾತ್ರ ದೋಣಿ ವಿಹಾರ ನಡೆಯುತ್ತಿತ್ತು. ಈಗ ಶಾಶ್ವತ ದೋಣಿ ವಿಹಾರಕ್ಕೆ ಹವಾಮ ಸಿದ್ದತೆ ನಡೆಸಿದ್ದು, ಇಲಾಖೆಗೆ ಶೇ.20ರಿಂದ 25 ಲಾಭಾಂಶದಲ್ಲಿ ಟೆಂಡರ್ ನಡೆದಿದೆ. ಗುತ್ತಿಗೆದಾರರು ಶನಿವಾರ ಲಾರಿಯಲ್ಲಿ ವಿಹಾರಕ್ಕಾಗಿ ಬೋಟ್ ತಂದಿರುವುದನ್ನು ಇಲ್ಲಿನ ಮೀನುಗಾರರು ಕೆರೆಯ ಮೇಲೆ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಕೆರೆಯಲ್ಲಿ ದೋಣಿ ವಿಹಾರ ಕೇಂದ್ರ ಮಾಡಲು ಯೋಜನೆ ರೂಪಿಸಲಾಗಿದೆ. ಇಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರ ವರೆಗೆ ಪ್ರವಾಸಿಗರೊಂದಿಗೆ ವಿಹಾರ ನಡೆಸಲು ಸಿದ್ದತೆ ನಡೆದಿದೆ. ಇದರಿಂದ ಪ್ರವಾಸೋದ್ಯಮ ಇಲಾಖೆಗೆ ಆದಾಯ ಬರಲಿದೆ. ಆದರೆ, ಇದರಿಂದ ಮೀನುಗಾರಿಗೆ ಮಾಡಲು ಆಗಲ್ಲ. ಕೆರೆಯಲ್ಲಿ ಮೀನಿನ ಬೇಟೆಗಾಗಿ ಎಲ್ಲ ಕಡೆ ಬಲೆ ಬೀಡಲಾಗುತ್ತದೆ. ಇದರಿಂದ ಬೆಲೆ ಎಲ್ಲ ಹರಿದು ಹೋಗಲಿದೆ. ವಿಹಾರದ ಬೋಟ್‌ಗಳಿಗೂ ಸಮಸ್ಯೆ ಆಗಲಿ. 149 ಕುಟುಂಬಗಳು ಕೆರೆಯನ್ನೆ ನಂಬಿ ಜೀವನ ನಡೆಸುತ್ತಿದೆ. ಇಲ್ಲಿ ವಲಸೆ ಪಕ್ಷಿಗಳ ತಂಗುದಾಣವಾಗಿದ್ದು, ಅವುಗಳಿಗೂ ಆಶ್ರಯ ಇಲ್ಲದಂತೆ ಸಮಸ್ಯೆ ಆಗಲಿದೆ. ಕೆಲ ಪ್ರವಾಸಿಗರ ಕಿಟಲೆಗಳಿಂದ ನಡೆಯ ಬಹುದಾದ ಅನಾಹುತಗಳು ಇಲ್ಲಿ ಕೂಡ ಆಗಬಹುದು. ನೀರಿನಲ್ಲಿ ಅವಘಡಗಳಾದರೆ ಜೀವ ಹಾನಿ ಆಗುವ ಸಾದ್ಯತೆಗಳಿವೆ. ಈ ಹಿಂದೆ ಕೆರೆಯಲ್ಲಿ ನಡೆದ ಹಲವು ಘಟನೆಗಳಲ್ಲಿ ಈ ವರೆಗೆ ಬದುಕುಳಿದ ಸಂಖ್ಯೆ ವಿರಳವಾಗಿದೆ. ಆದ್ದರಿಂದ ಈ ಯೋಜನೆ ಜಾರಿಯಾಗಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೀನುಗಾರ ಕುಮಾರ್, ಮಣಿ, ಶೇಖರ್, ಹನುಮಂತ, ಪೊನ್ನಪ್ಪ, ಮನ್ನಮ್ಮ, ಲಕ್ಷಿö್ಮ, ಭಾಗ್ಯ, ದುರಗಮ್ಮ ಇತರರಿದ್ದರು.