ಹೊಸಪೇಟೆ ಕಮಲಾಪುರದ ರೈತ ಸಮುದಾಯ ಭವನದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಪಾಸೆಣೆ ಮಾಡಿಕೊಂಡರು. ಪ್ರವಾಸೋದ್ಯಮ ಇಲಾಖೆ ಡಿಡಿ ಪ್ರಭುಲಿಂಗ ಎಸ್.ತಳಕೇರಿ, ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಜಯಶ್ರೀ ರಾಜಗೋಪಾಲ್, ರೇಖಾ ಪ್ರಕಾಶ್ ಇತರರಿದ್ದರು. 
ವಿಜಯನಗರ

ಆರೋಗ್ಯ ಸಮಸ್ಯೆಗೆ ವೈದ್ಯರ ಸಲಹೆ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ತಪಾಸಣಾ ಶಿಬಿರದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸಲಹೆ
ಹೊಸಪೇಟೆ: ಸಂಘ ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಆರೋಗ್ಯ ಶಿಬಿರಗಳನ್ನು ಕೈಗೊಂಡಾಗ ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಇನ್ನರ್ ವೀಲ್ ಕ್ಲಬ್ ಸಹಯೋಗದಲ್ಲಿ ತಾಲೂಕಿನ ಕಮಲಾಪುರದ ರೈತ ಸಮುದಾಯ ಭವನದಲ್ಲಿ ಪ್ರವಾಸಿ ಮಾರ್ಗದರ್ಶಿ, ಪ್ರವಾಸಿ ಮಿತ್ರ ಹಾಗೂ ಪುರಸಭೆ ಸಿಬ್ಬಂಧಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶ–ವಿದೇಶದ ಪ್ರವಾಸಿಗರಿಗೆ ನಾಡಿನ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವ ಮಹತ್ತರ ಜವಾಬ್ದಾರಿ ಪ್ರವಾಸಿ ಮಾರ್ಗದರ್ಶಿಗಳ ಮೇಲಿದೆ. ಅತಿಥಿ ದೇವೋಭವಃ ಎಂಬ ಭಾರತೀಯ ಸಂಸ್ಕೃತಿಯAತೆ ಪ್ರವಾಸಿಗರ ಮನದಲ್ಲಿ ಈ ನೆಲದ ಬಗ್ಗೆ ಗೌರವ ಮತ್ತು ಪ್ರೀತಿ ಮೂಡಿಸುವಲ್ಲಿ ಮಾರ್ಗದರ್ಶಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ಪ್ರವಾಸಿ ಮಾರ್ಗದರ್ಶಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಯಾವುದೇ ಆರೋಗ್ಯ ಸಮಸ್ಯೆ ಕಂಡುಬAದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಪ್ರವಾಸೋದ್ಯಮ ಇಲಾಖೆ ಡಿಡಿ ಪ್ರಭುಲಿಂಗ ಎಸ್.ತಳಕೇರಿ, ಕಮಲಾಪುರ ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ವೈದ್ಯರಾದ ಡಾ.ಯೋಗಾನಂದ ರೆಡ್ಡಿ, ಡಾ.ನಾರಾಯಣ, ಡಾ.ವೆಂಕಟೇಶ್ ಬಾಬು, ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಜಯಶ್ರೀ ರಾಜಗೋಪಾಲ್, ಪ್ರಮುಖರಾದ ನೈಮಿಷಾ, ಆರತಿ, ಉಮಾ ಲೋಕೇಶ್, ಸುಜಾತ ನಾಗರಾಜ್, ರೇಖಾ ಪ್ರಕಾಶ್ ಇತರರಿದ್ದರು.