ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾ ಗ್ರಾಪಂ ಚುನಾವಣೆ ಹಿನ್ನೆಲೆ ಮತಗಟ್ಟೆಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಭೇಟಿ ನೀಡಿ ಪರಿಶೀಲಿಸಿದರು. ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್ ಇತರರಿದ್ದರು.
- ಸೀತಾರಾಮ ತಾಂಡ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಭೇಟಿ
ಹೊಸಪೇಟೆ: ಚುನಾವಣಾ ವೇಳೆಗೆ ಮತಕ್ಷೇತ್ರದ ಎಲ್ಲಾ ಮತಗಟ್ಟೆಗಳು ಮೂಲ ಸೌಕರ್ಯಗಳೊಂದಿಗೆ ಮತದಾನ ಪ್ರಕ್ರಿಯೆಗೆ ಸನ್ನದ್ಧವಾಗಿರುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾವಣಾ ಸೇವೆಯಲ್ಲಿನ ಸಿಬ್ಬಂದಿ ಆದ್ಯತೆಯಲ್ಲಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಸೀತಾರಾಮ ತಾಂಡಾ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮತಗಟ್ಟೆಯಲ್ಲಿ ಶೌಚಾಲಯಗಳು ಸರಿಯಾಗಿ ನಿರ್ವಹಿಸಿ, ಹಾಗೂ ಸ್ವಚ್ಛತೆಗೆ ಪಂಚಾಯಿತಿ ಕ್ರಮವಹಿಸಬೇಕು, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಮತಗಟ್ಟೆಗೆ ಅವಶ್ಯಕ ಮೂಲಸೌಕರ್ಯ ಒದಗಿಸಿ, ಸ್ವಚ್ಛತೆ ಹಾಗೂ ಶುದ್ಧ ವಾತಾವರಣ ರೂಪಿಸುವತ್ತ ಗಮನಹರಿಸಬೇಕು. ಜತೆ ಚುನಾವಣಾ ಕಾರ್ಯಕ್ಕೆ ಅವಶ್ಯಕ ವ್ಯವಸ್ಥೆ ಕಲ್ಪಿಸುವುದು ಹಾಗೂ ಯಾವುದೇ ರೀತಿಯ ಅಶಿಸ್ತು ಮತ್ತು ಬೇಜವಾಬ್ದಾರಿಗೆ ಅವಕಾಶವಿಲ್ಲದಂತೆ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸೀತಾರಾಮ ತಾಂಡಾದಲ್ಲಿ ನಾಲ್ಕು ಸ್ಥಾನ 4, ನೆಲ್ಲಾಪುರದಲ್ಲಿ 3 ಸ್ಥಾನ, ಹೊಸಚಿನ್ನಾಪುರ 1 ಒಂದು ಸ್ಥಾನಕ್ಕೆ ಒಟ್ಟು 8 ಸ್ಥಾನಕ್ಕೆ 30 ಜನ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಕಾರ್ಯ ಬುಧವಾರ ಪೂರ್ಣವಾಗಿದೆ. ಡಿ.12ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿ.21 ರಂದು ಬೆಳಿಗ್ಗೆ 7 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿ.24ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಸೂಚಿಸಿದರು.