ಕಂಪ್ಲಿಯಲ್ಲಿ ಹಮ್ಮಿಕೊಂಡಿದ್ದ ಉಜ್ಜಯಿನಿ ಶ್ರೀ ಸಿದ್ಧಲಿಂಗ ಜಗದ್ಗುರುಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸೋಮಸಮುದ್ರದ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನದ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಪ್ರಮುಖರಾದ ಎಂ.ಎಸ್.ಶಶಿಧರಸ್ವಾಮಿ, ಕೆ.ಎಂ.ಹೇಮಯ್ಯಸ್ವಾಮಿ, ಎಚ್.ಎಂ.ಶರಣಬಸವರಾಜ, ಗೊಗ್ಗ ಚನ್ನಬಸವರಾಜ ಇದ್ದರು.
ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲಲು ಪ್ರವಚನ ಸಹಕಾರಿ
ಕಂಪ್ಲಿ: ಶಿವಾನುಭವದಿಂದ ಮನದ ಕೊಳೆ ಸ್ವಚ್ಛಗೊಳಿಸಲು ಸಾಧ್ಯ ಎಂದು ಸೋಮಸಮುದ್ರದ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಶಾಖಾಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ನಗರದ ಗುರುಮಠದಲ್ಲಿ ಹಮ್ಮಿಕೊಂಡಿದ್ದ ಲಿಂ.ಗೊಗ್ಗ ಬಸಯ್ಯನವರ 42ನೇ ಪುಣ್ಯಸ್ಮರಣೆ, ಉಜ್ಜಯಿನಿ ಶ್ರೀಸಿದ್ಧಲಿಂಗ ಜಗದ್ಗುರುಗಳ 90ನೇ ಪುಣ್ಯಸ್ಮರಣೆ, ವಚನಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲಲು ಪುರಾಣ ಪ್ರವಚನ ಶಿವಾನುಭವಗಳು ಸಹಕಾರಿ ಎಂದರು. ಸಾಂಗತ್ರಯ ಸಂಸ್ಕೃತ ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರಸ್ವಾಮಿ ಮಾತನಾಡಿ, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ ಸ್ಥಾಪಿಸಿ, ಮುನ್ನಡೆಸುವಲ್ಲಿ ಉಜ್ಜಯಿನಿ ಶ್ರೀ ಸಿದ್ಧಲಿಂಗ ಜಗದ್ಗುರುಗಳ ಪಾತ್ರ ಮಹತ್ವದ್ದು.
ಲಿಂ.ಗೊಗ್ಗ ಬಸಯ್ಯನವರ ಸಮಯ ನಿಷ್ಠೆ, ಕರ್ತವ್ಯ ಪರಿಪಾಲನೆ, ಸಮಾಜದ ಕಳಕಳಿ ಅನನ್ಯವಾಗಿದ್ದು ಎಂದು ತಿಳಿಸಿದರು. ಕೆ.ಎಂ.ಶ್ರೀರಕ್ಷಾ ಅವರಿಂದ ವಚನ ಗಾಯನ ನಡೆಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಅಯೋಧ್ಯೆ ಎಚ್.ಎಂ.ಶರಣಬಸವರಾಜ, ಗೊಗ್ಗ ಚನ್ನಬಸವರಾಜ, ಗೊಗ್ಗ ಗುರುಸಿದ್ಧಯ್ಯ, ಕಾರ್ತೀಕಸ್ವಾಮಿ, ಬಸವಕುಮಾರ್, ಘನಮಠದಯ್ಯ ಹಿರೇಮಠ, ಎಸ್.ಎಸ್.ಎಂ.ಚನ್ನಬಸವರಾಜ, ಕೆ.ಗಂಗಾಧರ, ಬಿ.ಎಸ್.ಲೋಕನಾಥ, ಎಸ್.ಡಿ.ಬಸವರಾಜ, ಎಚ್.ಎಂ.ಜಗದೀಶ, ಕೆ.ಎಂ.ಚಂದ್ರಶೇಖರಸ್ವಾಮಿ, ಮೆಟ್ರಿ ಯೋಗರಾಜಾಚಾರಿ, ಅಕ್ಕಮಹಾದೇವಿ ಮಹಿಳಾ ಮಂಡಲಿ ಸದಸ್ಯರು ಇತರರಿದ್ದರು.