ಕಾನಹೊಸಹಳ್ಳಿ ಸಮೀಪದ ಐಗಳಮಲ್ಲಾಪುರದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕದಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತ್ಯುತ್ಸವವನ್ನು ಸಂಘಟನೆಯ ಜಿಲ್ಲಾ ಸಂಚಾಲಕ ದುರುಗೇಶ್ ಉದ್ಘಾಟಿಸಿದರು. 
ವಿಜಯನಗರ

ಉತ್ತಮ ಶಿಕ್ಷಣದಿಂದ ದಲಿತರ ಅಭಿವೃದ್ಧಿ ಸಾಧ್ಯ

ಅಶೋಕ್ ಕುಮಾರ್ ಎನ್
ಕಾನಹೊಸಹಳ್ಳಿ: ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂಬ ಡಾ.ಅಂಬೇಡ್ಕರ್ ಅವರ ಕನಸು ನನಸಾಗಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಸ್.ದುರುಗೇಶ್ ಹೇಳಿದರು.
ಐಗಳಮಲ್ಲಾಪುರದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕದಿಂದ ಗುರುವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಹಾಗೂ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಸಂವಿಧಾನವನ್ನು ಉಳಿಸಲು ಪ್ರತಿಯೊಬ್ಬರೂ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಬೇಕು. ಆಗ ದಲಿತರ ಅಭಿವೃದ್ಧಿ ಸಾಧ್ಯ. ಡಾ.ಬಾಬು ಜಗಜೀವನರಾಮ್ ಕಾರ್ಮಿಕರು, ದೀನ ದಲಿತರು ಪರ ಸಾಕಷ್ಟು ಹೋರಾಟಗಳನ್ನು ಮಾಡಿದ್ದು, ಅವರ ಆದರ್ಶಗಳು ಎಂದಿಗೂ ಜೀವಂತವಾಗಿರಲಿವೆ. ಬಾಬೂಜಿ ತೋರಿದ ಮಾರ್ಗದಲ್ಲಿ ನಾವೆಲ್ಲರೂ ಮುನ್ನೆಡೆಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಂಚಾಲಕ ಬಡೇಲಡಕು ದುರುಗೇಶ್ ವಹಿಸಿದ್ದರು. ಜಿಲ್ಲಾ ಸಂಘಟನಾ ಸಂಚಾಲಕರಾದ ಬಿ.ಟಿ.ಗುದ್ದಿ ದುರುಗೇಶ್, ಕಂದಗಲ್ ಪರಶುರಾಮ್, ಟಿ.ಗಂಗಾಧರ್, ಚೌಡಾಪುರ ಬಸವರಾಜ್, ಕಾನಾಮಡುಗು ಪಕೀರಪ್ಪ, ಮಾಳೆಹಳ್ಳಿ ಮಂಜಪ್ಪ, ಹೊಸಹಳ್ಳಿ ಕರಿಬಸಪ್ಪ, ಅಜಯ್ ಕುಮಾರ್, ಕೃಷ್ಣಪ್ಪ, ಜಿತೇಂದ್ರ ಎಚ್.ರಮೇಶ್, ಫಕೀರಪ್ಪ, ಯಲ್ಲಪ್ಪ, ಮಹೇಶ್, ಎಚ್.ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಗಾಳೆಪ್ಪ, ಮಾಜಿ ಅಧ್ಯಕ್ಷ ನಾಗರಾಜ್, ವಿಎಸ್‌ಎಸ್‌ಎನ್ ಕಾರ್ಯದರ್ಶಿ ಮೂಗಪ್ಪ, ಸೋಮಶೇಖರ್, ಎಚ್.ಈರಪ್ಪ, ಎಚ್.ನಾಗರಾಜ್, ವೀರೇಶ್ ಇದ್ದರು.