ಹೊಸಪೇಟೆ ಎಸ್‌ಪಿ ಕಚೇರಿ ಮುಂದೆ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದಿಂದ ದಿಢೀರ್ ಪ್ರತಿಭಟನೆ ನಡೆಯಿತು. ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಪ್ರಮುಖರಾದ ಸಂದೀಪ್ ಸಿಂಗ್, ಅಶೋಕ್ ಜೀರೆ, ಕಿರಣ್ ಶಂಕ್ರಿ ಇತರರಿದ್ದರು.
- ಬಿಜೆಪಿ ಜಿಲ್ಲಾ ಘಟಕದಿಂದ ಎಸ್‌ಪಿ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ
ಹೊಸಪೇಟೆ: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮ ಮತ್ತು ಮಹಿಳೆಯರಿಗೆ ಅವಹೇಳನಕಾರಿ ವಿಡಿಯೊಗಳನ್ನು ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಎಸ್‌ಪಿ ಕಚೇರಿ ಮುಂದೆ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಯಿತು.
ಮಾ.05ರಂದು ಫೇಸ್‌ಬುಕ್ ನೋಡುತ್ತಿದ್ದಾಗ ಹಿಂದೂಗಳ ಭಾವನೆಗೆ, ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಪೋಸ್ಟ್ ಮಾಡಲಾಗಿದೆ. ವಿಡಿಯೊ ಪೋಸ್ಟ್ ಮಾಡಿದ ಮತ್ತು ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಜಗದೀಶ್ ಕಮಟಗಿ ಅವರಿಂದ ದೂರು ನೀಡಲಾಗಿದೆ. ಪೊಲೀಸ್ ಇಲಾಖೆಯಿಂದಲೇ ದೂರು ಹಿಂಪಡೆಯುವAತೆ ಸೂಚಿಸಿ ಬೆದರಿಕೆ ಬಂದಿದೆ. ಇದನ್ನು ಸಹಿಸಲಾಗದು. ಪೊಲೀಸ್ ಇಲಾಖೆ ತಕ್ಷಣ ತಪ್ಪು ಎಸಗಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು, ತಪ್ಪಿದಲ್ಲಿ ಮಾ.15ರಂದು ವಿವಿಧ ಸಂಘಟನೆಗಳ ಜತೆಗೂಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಪ್ರಮುಖರಾದ ಸಂದೀಪ್ ಸಿಂಗ್, ಅಶೋಕ್ ಜೀರೆ, ಕಿರಣ್ ಶಂಕ್ರಿ, ತಾರಿಹಳ್ಳಿ ಜಂಬುನಾಥ, ಬುಜ್ಜಿ ಹನುಮಂತ, ರಮೇಶ್ ಗುಪ್ತ, ಕಾಸಿಟ್ಟಿ ಉಮಾಪತಿ, ಮಧುರಚನ್ನ ಶಾಸ್ತ್ರಿ, ಉಮಾ, ಅನುರಾಧಾ ಇತರರಿದ್ದರು.