ಹೂವಿನಹಡಗಲಿ ಕಾಯಕ ಭವನದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಯಿತು. 
ವಿಜಯನಗರ

ಜನಸಾಮಾನ್ಯರಿಗೆ ಸಿದ್ಧಾಂತ ತಲುಪಿಸಿ

ಹೂವಿನಹಡಗಲಿ: ಅನೇಕರ ಪರಿಶ್ರಮದ ಫಲವಾಗಿ ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಕಾಯಕ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ನಮ್ಮ ಪಕ್ಷದ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಿಳಿಸಿ ಇನ್ನಷ್ಟು ಸಶಕ್ತಗೊಳಿಸಬೇಕಾಗಿದೆ. ಗ್ರಾಮೀಣ ಭಾಗದ ಜನರಲ್ಲಿ ಪಕ್ಷದ ಉದ್ದೇಶವನ್ನು ಸಾರುವ ಮೂಲಕ ಪಕ್ಷ ಸಂಘಟನೆಯಲ್ಲಿ ಎಲ್ಲರೂ ತೊಡಗಬೇಕು. ಅನೇಕ ಮಹನೀಯರು ಪಕ್ಷದ ಬಲವರ್ಧನೆಗೆ ಶ್ರಮಿಸಿರುವುದನ್ನು ನಾವು ಮರೆಯಬಾರದು ಎಂದರು.
ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಪ್ರಮುಖರಾದ ಮಂಜುನಾಥ ಜೈನ್, ಲಂಕೇಶ್ವರ, ನಾಗರಾಜ ಚಂದ್ರಶೇಖರ, ಕೆ.ಶಿವಕುಮಾರ, ಪುನೀತ್ ದೊಡ್ಡಮನಿ. ಇತರರಿದ್ದರು.