ಕನ್ನಡ ವಿವಿಯ ಅಧ್ಯಯನಾಂಗದಿAದ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯು.ಜಿ.ಸಿ. ಪಿಎಚ್.ಡಿ. ಕೋರ್ಸ್ವರ್ಕ್ ಮೊದಲನೇ ಹಂತದ ಸಂಶೋಧನಾ ಸಮಾವೇಶವನ್ನು ಲೇಖಕಿ ಡಾ.ಬಿ.ಯು.ಸುಮಾ ಉದ್ಘಾಟಿಸಿದರು. ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಪ್ರಾಧ್ಯಾಪಕರಾದ ಡಾ.ಶಿವಾನಂದ ವಿರಕ್ತಮಠ, ಡಾ.ಅಮರೇಶ ಯತಗಲ್ ಇದ್ದರು.
- ಕನ್ನಡ ವಿವಿಯಲ್ಲಿ ಲೇಖಕಿ ಡಾ.ಬಿ.ಯು.ಸುಮಾ ಅಭಿಪ್ರಾಯ
ಹೊಸಪೇಟೆ: ಸಂಸ್ಕöÈತಿ ಪ್ರತಿಯೊಂದು ಕಾಲಘಟ್ಟದಲ್ಲೂ ಬದಲಾವಣೆಗೊಳ್ಳುತ್ತಾ ಸಂಶೋಧನಾ ಅಧ್ಯಯನ ವಿಧಾನಗಳ ಮೂಲಕ ಹೊಸ ಅರ್ಥಗಳನ್ನು ಪಡೆದು ಮುನ್ನೆಲೆಗೆ ಬರುತ್ತದೆ ಎಂದು ಲೇಖಕಿ ಡಾ.ಬಿ.ಯು.ಸುಮಾ ಹೇಳಿದರು.
ಕನ್ನಡ ವಿವಿಯ ಅಧ್ಯಯನಾಂಗದಿAದ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯು.ಜಿ.ಸಿ. ಪಿಎಚ್.ಡಿ. ಕೋರ್ಸ್ವರ್ಕ್ ಮೊದಲನೇ ಹಂತದ ಸಂಶೋಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಂಸ್ಕöÈತಿ ಅಧ್ಯಯನದಲ್ಲಿ ಭಾವನೆ, ವಿಧಾನ ಹಾಗೂ ಗ್ರಹಿಕೆ ಪ್ರಮುಖ ಅಂಶಗಳಾಗಿವೆ. ಭಾಷೆ, ಸಾಮಾಜಿಕತೆ, ಆರ್ಥಿಕತೆ, ರಾಜಕೀಯ, ಮನಶಾಸ್ತç ಹಾಗೂ ಐಡಿಯಾಲಜಿಗಳು ಸಂಸ್ಕöÈತಿಯೊಳಗೆ ಆಳವಾಗಿ ಹೂತು ಹೋಗಿರುವುದರಿಂದ ಅವುಗಳನ್ನು ಸೂಕ್ತವಾಗಿ ಗ್ರಹಿಸುವ ಅಗತ್ಯವಿದೆ. ಸಂಸ್ಕöÈತಿ ಎನ್ನುವುದು ವಿಶಾಲ ಕ್ಷೇತ್ರವಾಗಿದ್ದು, ಅದನ್ನು ಒಂದೇ ವ್ಯಾಖ್ಯಾನದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಪ್ರತಿಯೊಂದು ಕಾಲಘಟ್ಟದಲ್ಲೂ ಸಂಸ್ಕöÈತಿ ರೂಪಾಂತರಗೊಳ್ಳುತ್ತದೆ. ಹಳೆ ಪಾತ್ರ, ಹಳೆ ಕಬ್ಬಿಣ ಎಂಬ ಸಿನಿಮಾ ಹಾಡು ಯಾವ ಸಂಸ್ಕöÈತಿಯನ್ನು ಪ್ರತಿನಿಧಿಸುತ್ತದೆ ಎಂಬ ಪ್ರಶ್ನೆಯನ್ನು ನಾವು ಸಂಶೋಧನಾ ದೃಷ್ಟಿಯಿಂದ ಅರ್ಥೈಸಬೇಕು ಎಂದರು.
ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಕನ್ನಡ ವಿವಿ ಸಂಶೋಧಕರ ಮನಸ್ಸನ್ನು ತೀಕ್ಷ÷್ಣಗೊಳಿಸುವುದರ ಜತೆಗೆ ಅವರಿಗೆ ರೆಕ್ಕೆ-ಪುಕ್ಕಗಳನ್ನು ಕಟ್ಟುವ ಕಾರ್ಯ ಮಾಡುತ್ತಿದೆ. ಸಂಶೋಧನೆಯಲ್ಲಿ ಇರುವ ವಿಧಾನಾತ್ಮಕ ಕೊರತೆಗಳನ್ನು ಗುರುತಿಸಿ, ಅದಕ್ಕೆ ಪೂರಕ ಪರಿಹಾರಗಳನ್ನು ಕಂಡುಕೊಳ್ಳುವ ದಾರಿಯನ್ನು ವಿದ್ಯಾರ್ಥಿಗಳಿಗೆ ವಿವಿ ತೋರಿಸುತ್ತಿದೆ ಎಂದರು.
ಲಲಿತಕಲೆಗಳ ನಿಕಾಯದ ಡೀನ್ ಡಾ.ಶಿವಾನಂದ ವಿರಕ್ತಮಠ, ಅಧ್ಯಯನಾಂಗ ನಿರ್ದೇಶಕ ಡಾ.ಅಮರೇಶ ಯತಗಲ್, ಪತ್ರಿಕೋದ್ಯಮ ವಿಭಾಗದ ಅಧ್ಯಾಪಕಿ ಕೆ.ಪದ್ಮಾವತಿ, ಅಧ್ಯಯನಾಂಗದ ಅಧೀಕ್ಷಕ ಲಕ್ಷ÷್ಮಣ ಮಹಾಮುನಿ