ಹೊಸಪೇಟೆ ಪರೀಕ್ಷಾ ಕೇಂದ್ರವೊAದರ ಮುಂದೆ ಅಭ್ಯರ್ಥಿಗಳನ್ನು ಬಿಗಿ ತಪಾಸಣೆಗೆ ಒಳಪಡಿಸಿ ಒಳಗೆ ಬಿಡಲಾಯಿತು.
- 12 ಕೇಂದ್ರಗಳಲ್ಲಿ 11,773 ಅಭ್ಯರ್ಥಿಗಳು ಭಾಗಿ
ಹೊಸಪೇಟೆ: ವಿಜಯನಗರ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ಕೇಂದ್ರವಾಗಿರುವ ನಗರದಲ್ಲಿ ಭಾನುವಾರ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (ಸಿಪಿಸಿ) ನೇಮಕಾತಿಯ ಲಿಖಿತ ಪರೀಕ್ಷೆಯು ಬಿಗಿ ಭದ್ರತೆ ಹಾಗೂ ಶಾಂತಿಯುತವಾಗಿ ನಡೆಯಿತು.
ನಗರದಾದ್ಯಂತ ಗುರುತಿಸಲಾಗಿದ್ದ ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಪ್ರಕ್ರಿಯೆಗಳು ನೆರವೇರಿದವು. ಬೆಳಗಿನ ಅವಧಿಯಲ್ಲಿ ನಡೆದ ಪರೀಕ್ಷೆಗೆ ಒಟ್ಟು 6,092 ಅಭ್ಯರ್ಥಿಗಳು ಹಾಜರಾಗಿದ್ದರೆ, ಮಧ್ಯಾಹ್ನದ ಅವಧಿಯಲ್ಲಿ 12 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 5,675 ಅಭ್ಯರ್ಥಿಗಳು ಭಾಗವಹಿಸಿದ್ದರು. ಹೀಗೆ ದಿನವಿಡೀ ಒಟ್ಟು 11,773 ಅಭ್ಯರ್ಥಿಗಳು ತಮ್ಮ ಭವಿಷ್ಯದ ಪೊಲೀಸ್ ಹುದ್ದೆಯ ಕನಸಿನೊಂದಿಗೆ ಪರೀಕ್ಷೆ ಬರೆದಿದ್ದಾರೆ.
ಯಾವುದೇ ಅಕ್ರಮಗಳಿಗೆ ಆಸ್ಪದ ನೀಡದಂತೆ ಪೊಲೀಸ್ ಇಲಾಖೆಯು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಸರ್ಪಗಾವಲು ಏರ್ಪಡಿಸಿತ್ತು. ಪರೀಕ್ಷಾರ್ಥಿಗಳನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಿದ ಬಳಿಕವಷ್ಟೇ ಹಾಲ್‌ನೊಳಗೆ ಪ್ರವೇಶಿಸಲು ಅನುಮತಿ ನೀಡಲಾಯಿತು. ಇನ್ನು ಸರ್ಕಾರದ ಮಾರ್ಗದರ್ಶನ ಹಾಗೂ ಇಲಾಖೆಯ ಕಟ್ಟುನಿಟ್ಟಿನ ನಿಯಮಗಳನ್ನು ಗೌರವಿಸಿದ ಮಹಿಳಾ ಅಭ್ಯರ್ಥಿಗಳು, ತಮ್ಮ ಕಿವಿ ಓಲೆ, ಬಳೆಗಳು ಸೇರಿದಂತೆ ಇತರ ಆಭರಣಗಳನ್ನು ಸ್ವಪ್ರೇರಿತವಾಗಿ ಪರೀಕ್ಷಾ ಕೇಂದ್ರದ ಹೊರಗೆ ಬಿಟ್ಟು, ಸಂಪೂರ್ಣ ಸಹಕಾರದೊಂದಿಗೆ ಪರೀಕ್ಷಾ ಹಾಲ್‌ಗೆ ತೆರಳಿದ್ದು ವಿಶೇಷವಾಗಿ ಕಂಡುಬAತು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಚಾಕಚಕ್ಯತೆಯಿಂದಾಗಿ ಇಡೀ ಪರೀಕ್ಷಾ ಪ್ರಕ್ರಿಯೆಯು ಸುಗಮವಾಗಿ ಮುಕ್ತಾಯಗೊಂಡಿದೆ.