ಕೂಡ್ಲಿಗಿ ತಾಲೂಕಿನ ಅಡವಿ ಸೂರವ್ವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಶನಿವಾರ ಕಾರು ಪಲ್ಟಿಯಾಗಿರುವುದು. 
ವಿಜಯನಗರ

ಕಾರು ಕಂದಕಕ್ಕೆ ಉರುಳಿ ದಂಪತಿ ಸಾವು

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಅಡವಿ ಸೂರವ್ವನಹಳ್ಳಿ ಕ್ರಾಸ್ ಬಳಿ ಘಟನೆ
ಕೂಡ್ಲಿಗಿ: ಕೊಪ್ಪಳ ಜಿಲ್ಲೆಯ ಅಂಜಾನಾದ್ರಿ ಅಂಜನೇಯ ದರ್ಶನ ಪಡೆಯಲು ಬಂದ ಬೆಂಗಳೂರಿನ ದಂಪತಿ ರತ್ನ ಬಾಯಿ(65), ಶ್ರೀನಿವಾಸ್(70) ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಅಡವಿ ಸೂರವ್ವನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಶನಿವಾರ ನಡೆದಿದೆ.
ಬೆಂಗಳೂರಿನ ಪಾಟೀಲ್ ನಾರಾಯಣಸ್ವಾಮಿ ಲೇ ಔಟ್, ಸುಬ್ಬಣ್ಣ ಪಾಳ್ಯ ಬಡಾವಣೆ ನಿವಾಸಿಗಳಾದ ರೂಪೇಶ್, ಪತ್ನಿ ಕವಿತಾಬಾಯಿ ಹಾಗೂ ತಂದೆ ಶ್ರೀನಿವಾಶ್, ತಾಯಿ ರತ್ನಬಾಯಿ ಜತೆ ಬೆಂಗಳೂರಿನಿಂದ ಶನಿವಾರ ಬೆಳಿಗ್ಗೆ ಕೊಪ್ಪಳದ ಅಂಜಾನಾದ್ರಿಗೆ ಪ್ರಯಾಣಿಸಿದ್ದಾರೆ. ಆದರೆ, ರೂಪೇಶ್ ಅತಿ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದರಿಂದ ಕಾರು ನಿಯಂತ್ರಣ ತಪ್ಪಿ ಬ್ರಿಡ್ಜ್ ಪಕ್ಕದ ಕಂದಕಕ್ಕೆ ಉರುಳಿದೆ.
ಇದರಿಂದ ತೀವ್ರವಾಗಿ ಗಾಯಗೊಂಡು ರತ್ನ ಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶ್ರೀನಿವಾಸ್ ಕೂಡ್ಲಿಗಿ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರೂಪೇಶ್ ಹಾಗೂ ಕವಿತಾಬಾಯಿಗೆ ಗಾಯಗಳಾಗಿ ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.