ಸಿಂಧನೂರಿನಲ್ಲಿ ಬಿಇಒ ಬಸವಲಿಂಗಪ್ಪ ಹುಡೇದ್‌ಗೆ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ತಾಲೂಕು ಸಮಿತಿ ಮನವಿ ಸಲ್ಲಿಸಿತು. ಸಮಿತಿ ಗೌರವ ಅಧ್ಯಕ್ಷ ಶೇಕ್ಷಾಖಾದ್ರಿ, ತಾಲೂಕು ಅಧ್ಯಕ್ಷೆ ವಿಶಾಲಾಕ್ಷಮ್ಮ, ಕಾರ್ಯದರ್ಶಿ ಶರಣಮ್ಮ ಪಾಟೀಲ್, ಖಜಾಂಚಿ ರೇಣುಕಮ್ಮ, ಶ್ರೀದೇವಿ ಇತರರಿದ್ದರು.
- ಕ್ಷೇತ್ರ
- ಶಿಕ್ಷಣಾಧಿಕಾರಿ
- ಮನವಿ
ಸಿಂಧನೂರು: ಅಕ್ಷರ ದಾಸೋಹ ಯೋಜನೆಯಡಿ ಮುಖ್ಯಶಿಕ್ಷಕರ ಮತ್ತು ಮುಖ್ಯ ಅಡುಗೆದಾರರ ಜಂಟಿ ಖಾತೆಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ತಾಲೂಕು ಸಮಿತಿಯಿಂದ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ ಹುಡೇದ್‌ಗೆ ಮನವಿ ಸಲ್ಲಿಸಲಾಯಿತು.
ಈ ಮೊದಲು ಮುಖ್ಯ ಅಡುಗೆದಾರರು ಮತ್ತು ಮುಖ್ಯಶಿಕ್ಷಕರ ಜಂಟಿ ಖಾತೆಯೊಂದಿಗೆ ಯೋಜನೆಯು ಸಮರ್ಪಕ ಜಾರಿ ಮತ್ತು ಅನುಷ್ಠಾನವಾಗುತ್ತಿತ್ತು. ಆದರೆ, ಎಸ್ಡಿಎಂಸಿಯವರಿಗೆ ಖಾತೆ ಜವಾಬ್ದಾರಿ ನೀಡಿರುವುದರಿಂದ ಯೋಜನೆ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ಎಸ್ಡಿಎಂಸಿಯವರಿಗೆ ಯೋಜನೆಯ ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ.
ಕೆಲವು ಕಡೆ ಅನಗತ್ಯವಾಗಿ ಎಸ್ಡಿಎಂಸಿಯವರ ಕಿರುಕುಳದಿಂದ ಮುಖ್ಯಶಿಕ್ಷಕ, ಅಡುಗೆಯವರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಮುಖ್ಯಶಿಕ್ಷಕ, ಎಸ್ಡಿಎಂಸಿ ಅಧ್ಯಕ್ಷರ ಜಂಟಿ ಖಾತೆ ಬದಲಿಸಿ, ಮುಖ್ಯಶಿಕ್ಷಕ, ಮುಖ್ಯ ಅಡುಗೆದಾರರ ಖಾತೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.