ಹೊಸಪೇಟೆ: ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ನಕಲಿ ಖಾತೆಗೆ ರ‍್ಗಾವಣೆಯಾಗಿದ್ದು, ಲೂಟಿಯಾದ ಪರ‍್ಣ ಹಣ ಇನ್ನೂ ರ‍್ಕಾರಿ ಖಜಾನೆಗೆ ವಾಪಸ್ ಬಂದಿಲ್ಲ. ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದು ಬಿಜೆಪಿಗೆ ಸಿಕ್ಕ ಮೊದಲ ಜಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಮೂರು ತಿಂಗಳ 7,500 ಕೋಟಿ ರೂ. ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಈ ಹಣವೂ ನಕಲಿ ಖಾತೆಗೆ ಹೋಗಿದೆಯೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ರ‍್ಕಾರ ಜನರಿಗೆ ಹೈದರಾಲಿ ಮೋಸದ ಲೆಕ್ಕ ತೋರಿಸುವುದನ್ನು ಬಿಟ್ಟು ಕೂಡಲೇ ಬಾಕಿ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ ಅವರು, ಕೆಪಿಎಸ್ಸಿ ಭ್ರಷ್ಟಾಚಾರ ಮತ್ತು ಜಾತಿಯತೆ ಬಗ್ಗೆ ಒಂದು ರ‍್ಷದ ಹಿಂದೆಯೇ ವಿಧಾನಮಂಡಲದಲ್ಲಿ ಪ್ರಸ್ತಾಪಿಸಿದ್ದರೂ ರ‍್ಕಾರ ಎಚ್ಚೆತ್ತುಕೊಂಡಿಲ್ಲ. ಬರ ಘೋಷಣೆಯಾಗಿದ್ದರೂ ಪರಿಹಾರ ನೀಡಲು ರ‍್ಕಾರದ ಬಳಿ ಹಣವಿದೆಯೋ ಇಲ್ಲವೋ ಎಂಬ ಅನುಮಾನವಿದೆ ಎಂದರು.