ಕೊಟ್ಟೂರು ಗ್ರಾಪಂ ಆಡಳಿತಾಧಿಕಾರಿ ಡಾ.ಕೊಟ್ರೇಶಗೆ ಕಾಳಾಪುರ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ಸಂತೋಷ, ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾಧ್ಯಕ್ಷ ಕೆ ಕೊಟ್ರೇಶ, ಸಿಪಿಐ ತಾಲೂಕು ಕಾರ್ಯದರ್ಶಿ ಕೆ ರೇಣುಕಮ್ಮ, ಗ್ರಾಮದ ಮಹಿಳೆಯರಾದ ದುರುಗಮ್ಮ, ರೇಣುಕಮ್ಮ, ಗೌರಮ್ಮ, ಲಕ್ಷ್ಮಮ್ಮ ಇತರರಿದ್ದರು. 
ವಿಜಯನಗರ

ಸಮೀಕ್ಷೆ ನಡೆಸಿ ವಸತಿ ಸೌಲಭ್ಯ ಕಲ್ಪಿಸಲಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥ
  • ಗ್ರಾಪಂ ಆಡಳಿತಾಧಿಕಾರಿ
  • ಮನವಿ
* ಕಾಳಾಪುರ 
ಕೊಟ್ಟೂರು: ತಾಲೂಕಿನ ಕಾಳಾಪುರ ಗ್ರಾಮದ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಗ್ರಾಪಂ ಆಡಳಿತಾಧಿಕಾರಿ ಡಾ.ಕೊಟ್ರೇಶಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್. ಎಂ. ಸಂತೋಷ ಮಾತನಾಡಿ, ಕಾಳಾಪುರ ಗ್ರಾಮದ ಅನೇಕ ಬಡ ಕುಟುಂಬಗಳು ಹಲವು ದಶಕಗಳಿಂದ ಸ್ವಂತ ಸೂರಿನಿಂದ ವಂಚಿತರಾಗಿದ್ದಾರೆ. ಈ ಬಡ ಕುಟುಂಬಗಳು ತಮ್ಮ ದುಡಿಮೆಯ ಅರ್ಧ ಭಾಗವನ್ನು ಬಾಡಿಗೆ ಮನೆಗೆ ಮೀಸಲಿಟ್ಟು ಸಂಕಷ್ಟ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಈ ಕುಟುಂಬಗಳು ಸರ್ಕಾರದ ವಸತಿ ಯೋಜನೆಗಳ ಅಡಿಯಲ್ಲಿ  ನಿವೇಶನ ಮತ್ತು ಮನೆಗಳಿಗಾಗಿ ಅರ್ಜಿ ಸಲ್ಲಿಸಿದರೂ ಸ್ಥಳೀಯ ಆಡಳಿತ ಸಂಸ್ಥೆ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಸ್ಥಳೀಯ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಸಮೀಕ್ಷೆ ನಡೆಸಿ ಆಶ್ರಯ ಯೋಜನೆಯಡಿ ಭೂಮಿ ಗುರುತಿಸಿ ಬಡ ಕುಟುಂಬಗಳಿಗೆ ನೀಡಬೇಕು ಎಂದು ಹೇಳಿದರು.
ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾಧ್ಯಕ್ಷ ಕೆ ಕೊಟ್ರೇಶ ಮಾತನಾಡಿ, ಈ ಹಿಂದೆ ಸರ್ಕಾರ ರಾಜೀವ್ ಗಾಂಧಿ ಯೋಜನೆಯಡಿ ಬಿಡುಗಡೆಗೊಳಿಸಿರುವ ಪಟ್ಟಿಯನ್ನು ಕ್ರಮಬದ್ಧವಾಗಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಕೆ ರೇಣುಕಮ್ಮ, ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ತಾಲೂಕು ಅಧ್ಯಕ್ಷ  ತೆಗ್ಗಿನಕೇರಿ ಕೊಟ್ರೇಶ, ಕಾಳಾಪುರ ಗ್ರಾಮದ  ಮಹಿಳೆಯರಾದ  ದುರುಗಮ್ಮ, ರೇಣುಕಮ್ಮ, ಗೌರಮ್ಮ, ಲಕ್ಷ್ಮಮ್ಮ  ಇತರರಿದ್ದರು.