ಹೂವಿನಹಡಗಲಿಯಲ್ಲಿ ತಹಸೀಲ್ದಾರ್ ಕೆ.ಎಂ.ಗುರುಸವರಾಜ ಅಧ್ಯಕ್ಷತೆಯಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನಾ ಸಭೆ ನಡೆಯಿತು.  
ವಿಜಯನಗರ

ಸ್ಥಳೀಯರ ಸಹಕಾರಿಂದ ಎಸ್‌ಐಆರ್ ಪೂರ್ಣಗೊಳಿಸಿ

ಹೂವಿನಹಡಗಲಿ: ಎಸ್‌ಐಆರ್ ಪ್ರಕ್ರಿಯೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಎಸ್‌ಐಆರ್ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಬಿಎಲ್‌ಒಗಳು ಮತದಾರರ ಮನೆಗೆ ತೆರಳಿದಾಗ ಮತದಾರರು ದಾಖಲಾತಿ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಬಿಎಲ್‌ಒಗಳು ಸ್ಥಳೀಯರ ಸಹಕಾರದಿಂದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಬೇಕು ಎಂದು ಸೂಚಿಸಿದರು.
ಕೆಲವೆಡೆ ದಾಖಲಾತಿಗಳಲ್ಲಿ ವ್ಯತ್ಯಾಸಗಳಿದ್ದು, ಹೆಸರು, ಭಾವಚಿತ್ರದಲ್ಲಿ ವ್ಯತ್ಯಾಸವಿದ್ದರೆ ಕಚೇರಿ ಸಿಬ್ಬಂದಿ ಗಮನಕ್ಕೆ ತರಬೇಕು. ಬಿಎಲ್‌ಒಗಳಿಗೆ ಶೋಕಾಸ್ ನೋಟಿಸ್ ನೀಡಿದ್ದು, ಈ ಪೈಕಿ ಕೆಲವರು ಪ್ರಗತಿ ಸಾಧಿಸಿದ್ದಾರೆ. ನಮ್ಮ ಕೆಲಸ ಮತದಾರರನ್ನು ಗುರುತಿಸುವುದು ಹಾಗೂ ನಂತರ ಕೆಲ ವ್ಯತ್ಯಾಸಗಳನ್ನು ಸರಿಪಡಿಸುವುದಾಗಿದೆ. ಕೆಲವು ಮತದಾರರು ಬೇರೆಡೆ ಸ್ಥಳಾಂತರಗೊಂಡಿರುವ ಮಾಹಿತಿ ಇದ್ದು, ಅವರನ್ನು ಗುರುತಿಸುವ ಕಾರ್ಯನಡೆಯಬೇಕು ಎಂದರು.
ತಾಪಂ ಇಒ ಪರಮೇಶ್ವರ, ಪುರಸಭೆ ಮುಖ್ಯಾಧಿಕಾರಿ ಹನುಮಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಹನುಮಂತಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಬಿಎಲ್‌ಒಗಳು, ವಿವಿಧ ಪಕ್ಷಗಳ ಪ್ರಮುಖರು ಇದ್ದರು.