ಡಿವೈಎಸ್ಪಿ ಡಾ.ಸಂತೋಷ ಚವ್ಹಾಣ್
ಹೊಸಪೇಟೆ: ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಗುರುತಿಸಿ ರಾಜ್ಯ ಸರ್ಕಾರ 2025ನೇ ಸಾಲಿನ ಮುಖ್ಯಮಂತ್ರಿ ಪದಕಗಳನ್ನು ಘೋಷಿಸಿದ್ದು, ವಿಜಯನಗರ ಜಿಲ್ಲೆಯಲ್ಲಿ ಡಿವೈಎಸ್ಪಿ ಸೇರಿ ನಾಲ್ಕು ಜನ ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಹರಪನಹಳ್ಳಿಯ ಡಿವೈಎಸ್ಪಿ ಡಾ.ಸಂತೋಷ ಚವ್ಹಾಣ್ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಇನ್ನು ಹೂವಿನಹಡಗಲಿ ಸಿಪಿಐಯಾಗಿದ್ದ ದೀಪಕ್ ರಮೇಶ್ ಭೂಸರೆಡ್ಡಿ, ನಗರದ ಟಿಬಿಡ್ಯಾಂ ಪೊಲೀಸ್ ಠಾಣೆಯ ಪಿಎಸ್‌ಐ ಇ.ಕೊದಂಡ ಪಾನಿ ಹಾಗೂ ಹರಪನಹಳ್ಳಿಯ ಪಿಸಿ ಕೆ.ಎಂ.ಆನAದ್ ಅವರಿಗೆ ರಾಜ್ಯ ಸರ್ಕಾರ ಸಿಎಂ ಪದಕ ಘೋಷಣೆ ಮಾಡಿದೆ. ಏ.02 ರಂದು ನಡೆಯುವ ಕಾರ್ಯಕ್ರಮದಲ್ಲಿ ಪದಕ ವಿತರಣೆ ಮಾಡಲಿದೆ.