ಹೂವಿನಹಡಗಲಿ ಶ್ರೀ ರಾಮ ದೇವಸ್ಥಾನದಲ್ಲಿ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. 
ವಿಜಯನಗರ

ಹಡಗಲಿಯಲ್ಲಿ ಗೋಪುರಕ್ಕೆ ಕಲಶಾರೋಹಣ

ಅಶೋಕ್ ಕುಮಾರ್ ಎನ್
ಹೂವಿನಹಡಗಲಿ: ಪಟ್ಟಣದ ಶ್ರೀರಾಮ ದೇವಸ್ಥಾನದಲ್ಲಿ ಶುಕ್ರವಾರ ಶ್ರೀರಾಮ ನವಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಿಗ್ಗೆ ಶ್ರೀರಾಮ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ದೇವಸ್ಥಾನದ ಗೋಪುರಕ್ಕೆ ನೂತನ ಕಲಶಾರೋಹಣ ಮಾಡಲಾಯಿತು. ಬೆಳಗ್ಗೆ ಹೋಮದ ಬಳಿಕ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮ ನಡೆಸಲಾಯಿತು. ಶ್ರೀರಾಮನವಮಿ ಅಂಗವಾಗಿ ದೇವಸ್ಥಾನದಲ್ಲಿ ಭಕ್ತರು ಹರಕೆ ತೀರಿಸಿದರು. ದೇವಸ್ಥಾನದ ಧರ್ಮದರ್ಶಿ ಡಾ.ರಾಕೇಶಯ್ಯ ರಾಮಸ್ವಾಮಿ ಇದ್ದರು. ವಹಿಸಿದ್ದರು.