ಸಂಡೂರು ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಕರ್ನಾಟಕ ಸಮರ ಸೇನೆ ಗುರುವಾರ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಕೆ.ಎಂ.ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜೆ.ಮಂಜುನಾಥ್, ಸದಸ್ಯರಾದ ಕೊಟ್ರೇಶ್ ಬಂಡ್ರಿ, ಅಬ್ದುಲ್ ವಾಹಿದ್, ಕೆ.ಎಸ್. ಹುಸೇನ್, ಯರ‌್ರಿಸ್ವಾಮಿ ಹಡಪದ, ಗೌರಿಪುರ ತಿಪ್ಪೇಸ್ವಾಮಿ, ಶರಣಪ್ಪ ಇತರರಿದ್ದರು. 
ವಿಜಯನಗರ

ಅತಿಕ್ರಮಣ ಜಾಗ ತೆರವುಗೊಳಿಸಿ

ಕುರುವತ್ತಿ ಶ್ರೀಕಾಂತಪ್ಪ

ಸಂಡೂರು: ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡು ನಿರ್ಮಿಸಿರುವ ಮನೆ ಹಾಗೂ ಕಾಂಪೌಂಡ್ ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸಮರ ಸೇನೆ ಸಂಘಟನೆ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಗುರುವಾರ ಮನವಿ ಸಲ್ಲಿಸಿತು.

ಕಸಸೇ ತಾಲೂಕು ಅಧ್ಯಕ್ಷ ಕೆ.ಎಂ.ನವೀನ್ ಕುಮಾರ್ ಮಾತನಾಡಿ, ಚೋರುನೂರು ಕಂದಾಯ ಗ್ರಾಮ ವ್ಯಾಪ್ತಿಯ ಬಿಸಿಎಂ ಹಾಸ್ಟೆಲ್ ಪಕ್ಕದ ಸರ್ಕಾರಿ ಜಾಗದಲ್ಲಿ ಕೆಲವರು ಮನೆ ನಿರ್ಮಿಸಿಕೊಂಡು ಸುತ್ತಲೂ ಕಾಂಪೌಂಡ್ ಕಟ್ಟಿಕೊಂಡಿದ್ದಾರೆ. ತೆರವಿಗೆ ಗ್ರಾಮಸ್ಥರು ಸೂಚಿಸಿದರೂ ಮನೆ ಮಾಲೀಕರು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಒತ್ತುವರಿ ತೆರವುಗೊಳಿಸಿ ಆ ಜಾಗವನ್ನು ಗ್ರಾಮದ ಅಭಿವೃದ್ಧಿಗೆ ಬಳಸಬೇಕೆಂದು ಮನವಿ ಮಾಡಿದರು.