ಹೊಸಪೇಟೆ ತಾಲೂಕಿನ ಮಲಪನಗುಡಿ ಬಳಿ ಬುಧವಾರ ಅರಸರಕಾಲದ ಕಾಲುವೆಗಳನ್ನು ಸ್ವಚ್ಛ ಮಾಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು. ಮಲಪನಗುಡಿ ಗ್ರಾಪಂ ಉಪಾಧ್ಯಕ್ಷ ದೊರೆ ರಾಜು, ರೈತರಾದ ನಾಗರಾಜ್, ಭೀಮಪ್ಪ, ಕಾಟೇಶ್, ತಾಯೇಶ್ ಮಂಜುನಾಥ ಇತರರಿದ್ದರು.
- ಮಲಪನಗುಡಿ ಬಳಿ ರೈತರಿಂದ ಪ್ರತಿಭಟನೆ
ಹೊಸಪೇಟೆ: ಅರಸರಕಾಲದ ಕಾಲುವೆಗಳನ್ನು ಸ್ವಚ್ಛ ಮಾಡುವಂತೆ ಒತ್ತಾಯಿಸಿ ರೈತರು ತಾಲೂಕಿನ ಮಲಪನಗುಡಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ನೀರಾವರಿ ಬಳಕೆದಾರರ ಸಂಘದ ಅಧ್ಯಕ್ಷ ಎಂ.ಡಿ.ಹುಲುಗಪ್ಪ ಮಾತನಾಡಿ, ತುಂಗಭದ್ರ ಜಲಾಶಯದ ವಿಜಯನಗರ ಕಾಲದ ಬಸವಣ್ಣ ಕಾಲುವೆ ಹಾದು ಬರುವ ಮಾರ್ಗದ ಉದ್ದಕ್ಕೂ, ಚರಂಡಿ ನೀರನ್ನು ಕಾಲುವೆಗೆ ಹರಿಬಿಡಲಾಗುತ್ತಿದೆ. ಅಲ್ಲದೆ ಆಸ್ಪತ್ರೆಯ ವ್ಯಾಜ್ಯ ಸೇರಿÀದಂತೆ ನಗರದ ಕಸವನ್ನು ಕಾಲುವೆಗೆ ಎಸೆಯಲಾಗುತ್ತಿದೆ. ಇದರ ಜತೆಗೆ ಸತ್ತ ನಾಯಿ, ದನ, ಹಂದಿಗಳನ್ನು ಕಾಲುವೆಗೆ ಎಸೆಯಲಾಗುತ್ತಿದೆ. ಹೂಳು, ತ್ಯಾಜ್ಯ ಹಾಗೂ ಗಿಡಗಂಟಿಗಳಿAದ ಮುಚ್ಚಿಹೋಗಿದೆ. ಇದರಿಂದ ಕಾಲುವೆ ನೀರನ್ನೆ ನಂಬಿ ಕೃಷಿ ಚಟುವಟಿಕೆ ನಡೆಸುವ ಕೊನೆಯ ಭಾಗದ ರೈತರಿಗೆ ನೀರು ದೊರೆಯುತ್ತಿಲ್ಲ. ಇದರಿಂದ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರುವ ನೀರು ಕಲುಷಿತಗೊಂಡಿರುವುದರಿAದ ರೈತರಿಗೆ ಸೋಂಕು ತಗುಲಿ ಹಲವಾರು ಕಾಯಿಲೆಗಳಿಗೆ ತುತ್ತಾಗುವ ಭೀತಿಯನ್ನು ಎದುರಿಸುತ್ತಿದ್ದರೆ ಎಂದು ಆಗ್ರಹಿಸಿದರು.
ಒಂದು ವಾರದೊಳಗೆ ಬಸವಣ್ಣ ಕಾಲುವೆಯಲ್ಲಿ ಹೂಳು ತೆಗೆದು, ಗಿಡಗಂಟಿಗಳನ್ನು ತೆರವುಗೊಳಿಸಿ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ºರಿಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಭಾಗದ ರೈತರು ಹಂಪಿ ಉತ್ಸವ ಸಂದರ್ಭದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸುವ ಜತೆಗೆ, ಉತ್ಸವಕ್ಕೆ ಆಗಮಿಸುವ ಜನಪ್ರತಿನಿಧಿಗಳು ಹಾಗೂ ಗಣ್ಯರಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.