ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿಯಲ್ಲಿ ಶ್ರೀ ಕರಿಬಸವೇಶ್ವರ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಕೆ.ನೇಮಿರಾಜ್ ನಾಯ್ಕ, ತೋಂಟದಾರ್ಯ ಶಾಖಾಮಠದ ಶಿವಮಹಾಂತ ಸ್ವಾಮೀಜಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ ಮತ್ತಿತರರು ಇದ್ದರು.
ಹಗರಿಬೊಮ್ಮನಹಳ್ಳಿ: ಬಾಚಿಗೊಂಡನಹಳ್ಳಿಯಲ್ಲಿ ಶ್ರೀ ಕರಿಬಸವೇಶ್ವರ ದೇಗುಲವನ್ನು ಶಾಸಕ ಕೆ.ನೇಮಿರಾಜ್ ನಾಯ್ಕ ಗುರುವಾರ ಉದ್ಘಾಟಿಸಿದರು.
ಈ ಭಾಗದ ಗಾಂಧಿವಾದಿ ಚನ್ನಬಸವನಗೌಡರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಮಾಲವಿ ಜಲಾಶಯ ನಿರ್ಮಾಣ ಮಾಡಿದರು. ಅವರ ಜನಪರ ಕಾರ್ಯಗಳು ನಮ್ಮ ಕಣ್ಣಮುಂದೆ ಇದ್ದು, ನಮ್ಮಂತಹ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಮಾಲವಿ ಜಲಾಶಯದ ಹತ್ತಿರ ಚನ್ನಬಸವನಗೌಡರ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಬಾಚಿಗೊಂಡನಹಳ್ಳಿಯಲ್ಲಿ ಶ್ರೀ ಆಂಜನೇಯ ಸ್ವಾಮಿ ರಥ ಸಾಗುವ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಗ್ರಾಮದಲ್ಲಿ ಸಂಜೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು. ತೋಂಟದಾರ್ಯ ಶಾಖಾಮಠದ ಶಿವ ಮಹಾಂತ ಸ್ವಾಮೀಜಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ಗ್ರಾ.ಪಂ. ಸದಸ್ಯ ಕರಿಬಸಪ್ಪ, ಪ್ರಮುಖರಾದ ರೋಹಿತ್, ಚನ್ನಬಸವರಾಜ, ಹೋಟೆಲ್ ಸಿದ್ದರಾಜು, ತಂಬ್ರಹಳ್ಳಿ ಬಣಕಾರ್ ಕೊಟ್ರೇಶ್, ಹೊಸ್ಕೆರೆ ದೊಡ್ಡಬಸಪ್ಪ ಇತರರಿದ್ದರು.