ಕಂಪ್ಲಿ ಪೊಲೀಸ್ ಠಾಣೆ ಸಭಾಂಗಣದಲ್ಲಿ ಯುಗಾದಿ, ರಂಜಾನ್ ಶಾಂತಿ ಸಭೆಯಲ್ಲಿ ಪಿಐ ಕೆ.ಬಿ.ವಾಸುಕುಮಾರ್ ಮಾತನಾಡಿದರು. ಡಿವೈಎಸ್ಪಿ ಪ್ರಸಾದ್ ಕೆ.ಗೋಖಲೆ ಇದ್ದರು.
- ಡಿವೈಎಸ್ಪಿ ಪ್ರಸಾದ್ ಕೆ.ಗೋಖಲೆ ಸಲಹೆ
- ಕಂಪ್ಲಿ ಯುಗಾದಿ ರಂಜಾನ್ ಶಾಂತಿಸಭೆ
ಕಂಪ್ಲಿ: ಯುಗಾದಿ ಮತ್ತು ರಂಜಾನ್ ಸಾಮರಸ್ಯದಿಂದ ಆಚರಿಸಬೇಕೆಂದು ಡಿವೈಎಸ್ಪಿ ಪ್ರಸಾದ್ ಕೆ.ಗೋಖಲೆ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಮಾ.19ರಂದು ಯುಗಾದಿ ಹಾಗೂ ಮಾ.21ರಂದು ರಂಜಾನ್ ಆಚರಿಸಲಾಗುತ್ತಿದ್ದು, ಹಿಂದು-ಮುಸ್ಲಿಮರು ಯಾವುದೇ ಗೊಂದಲ, ಸಂಘರ್ಷಗಳಿಗೆ ಆಸ್ಪದ ಕೊಡದಂತೆ ಹಬ್ಬ ಆಚರಿಸಬೇಕು. ಅಹಿತಕರ ಘಟನೆ ನಡೆಯದಂತೆ ಮುಖಂಡರು, ಯುವಜನತೆ ಮುಂಜಾಗ್ರತೆ ವಹಿಸಬೇಕು. ಘರ್ಷಣೆಗಳಾದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಯುಗಾದಿ ನಿಮಿತ್ತ ಬಣ್ಣದೋಕಳಿ ಆಡುವ, ರಂಜಾನ್ ಮೆರವಣಿಗೆ ಮಾರ್ಗ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪಿಐ ಕೆ.ಬಿ.ವಾಸುಕುಮಾರ್, ಎಎಸ್‌ಐ ಬಸವರಾಜ, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಹಬೀಬ್ ರೆಹಮಾನ್, ಡಿ.ವಿ.ಸತ್ಯನಾರಾಯಣ, ಕೆ.ಮಸ್ತಾನ್, ಎನ್.ಎಂ.ಪತ್ರೆಯ್ಯಸ್ವಾಮಿ, ಮೆಹಮೂದ್, ಟಿ.ವಿ.ಸುದರ್ಶನರೆಡ್ಡಿ, ವಾಹೀದ್, ಕರೇಕಲ್ ಮನೋಹರ, ಎಲಿಗಾರ ನಾಗರಾಜ, ಉಸ್ಮಾನ್ ಇತರರಿದ್ದರು.