ಹೊಸಪೇಟೆ ಚಿತ್ತವಾಡ್ಗಿ ಪೊಲೀಸರು ಬೈಕ್ ಕಳ್ಳತನ ಮಾಡುತ್ತಿದ್ದ ಮಹಮ್ಮದ್ ಇರ್ಫಾನ್ ನಿಂದ 11 ಬೈಕ್ ವಶ ಪಡೆದರು. ಎಎಸ್ಪಿ ಮಂಜುನಾಥ, ಸಿಪಿಐ ಸೋಮ್ಲಾ ನಾಯ್ಕ, ಪಿಎಸ್ಐ ವಿರೂಪಾಕ್ಷಯ್ಯ, ಎಎಸ್ ಐ ಡಿ.ಶೇಖರ್, ಪೆದೆಗಳಾದ ಪ್ರಕಾಶ, ನಾಗರಾಜ್, ಗೋಣಿ ಬಸವೇಶ್ವರ ಸ್ವಾಮಿ, ಅನಿಲ್, ನವಿನ್ ಕೋಟ್ರೇಶ್, ಬಸವರಾಜ್ ಇತರರಿದ್ದರು.
ಹೊಸಪೇಟೆ: ನಗರ ಸೇರಿದಂತೆ ವಿವಿಧ ಕಡೆ ಬೈಕ್ ಕಳ್ಳತನ ಮಾಡುತ್ತಿದ್ದ ಇಲ್ಲಿನ ಸಿದ್ದಲಿಂಗಪ್ಪ ಚೌಕಿ ನಿವಾಸಿ
ಮಹಮ್ಮದ್ ಇರ್ಫಾನ್(21) ಎಂಬುವನ್ನು ಚಿತ್ತವಾಡ್ಗಿ ಪೊಲೀಸರು ಬಂಧಿಸಿದ್ದಾರೆ.
ಬೈಕ್ ಕಳವು ಪ್ರಕರರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತ್ತೀಚೆಗೆ ಕಾರ್ಯಾಚರಣೆ ನಡೆಸಿ ಆರೋಪಿ ಮಹಮ್ಮದ್ ಇರ್ಫಾನ್ ಬಂಧಿಸಿದ್ದಾರೆ. ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆ ಸೇರಿದಂತೆ ನಾನಾ ಕಡೆ ಕಳವು ಮಾಡಿದ ಅಂದಾಜು ಐದು ಲಕ್ಷ ರೂ. ವೆಲೆಬಾಳುವ 11 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ, ಹೋಂಡಾ ಮತ್ತು ಹೀರೊ ಕಂಪನಿಯ ಬೈಕ್ ಗಳನ್ನು ನಕಲಿ ಕೀ ಬಳಕೆ, ಮತ್ತು ಹ್ಯಾಂಡ್ ಲಾಕ್ ಮುರಿದು ಬೈಕ್ ಕಳ್ಳತನ ಮಾಡುತ್ತಿದ್ದನ್ನು. ನಗರದ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.