ಮಲಪನಗುಡಿ ಗ್ರಾಮ ಪಂಚಾಯಿತಿಯಲ್ಲಿ ಬೇಟಿ ಬಚಾವೋ–ಬೇಟಿ ಪಢಾವೋ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಗಂಗಪ್ಪ ಉದ್ಘಾಟಿಸಿದರು. ಜಿ.ಪಂ. ಸಹಾಯಕ ಯೋಜನಾ ನಿರ್ದೇಶಕ ಉಮೇಶ್, ಜಿಲ್ಲಾ ನಿರೂಪಣಾಧಿಕಾರಿ ಮುದುಕಪ್ಪ, ಸಿಡಿಪಿಒ ಹೊನ್ನೂರ ಅಲಿ ಇತರರಿದ್ದರು. 
ವಿಜಯನಗರ

ಬೇಟಿ ಬಚಾವೋ–ಬೇಟಿ ಪಢಾವೋ ಜಾಗೃತಿ ಅಭಿಯಾನ

ಹೊಸಪೇಟೆ: ತಾಲೂಕಿನ ಮಲಪನಗುಡಿ ಗ್ರಾಮ ಪಂಚಾಯಿತಿಯಲ್ಲಿ ಹೆಣ್ಣುಮಕ್ಕಳ ರಕ್ಷಣೆ, ಶಿಕ್ಷಣ ಹಾಗೂ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಬೇಟಿ ಬಚಾವೋ–ಬೇಟಿ ಪಢಾವೋ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಗಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣುಮಕ್ಕಳಿಗೆ ಸಮಾನ ಅವಕಾಶಗಳನ್ನು ನೀಡಿ, ಅವರ ರಕ್ಷಣೆಗೆ ಇಡೀ ಸಮಾಜ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿ.ಪಂ. ಸಹಾಯಕ ಯೋಜನಾ ನಿರ್ದೇಶಕ ಉಮೇಶ್ ಮಾತನಾಡಿ, ಲಿಂಗಭೇದವಿಲ್ಲದೆ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಕುಟುಂಬ ಮತ್ತು ಸಮುದಾಯ ಪ್ರೋತ್ಸಾಹ ನೀಡಬೇಕು ಎಂದರು.
ಜಿಲ್ಲಾ ನಿರೂಪಣಾಧಿಕಾರಿ ಮುದುಕಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಡಿಪಿಒ ಹೊನ್ನೂರ ಅಲಿ, ಪಿಡಿಒ ಹನುಮಂತಪ್ಪ, ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ ವಿದ್ಯಾಬಾಯಿ, ಮಹಿಳಾ ಮೇಲ್ವಿಚಾರಕಿ ಎಲ್.ಡಿ.ನದಾಫ್ ಇತರರಿದ್ದರು.