ಹೊಸಪೇಟೆ ಉಪವಿಭಾಗಿಯಾಧಿಕಾರಿ ಆದೇಶ 
ವಿಜಯನಗರ

ಹಂಪಿ ಉತ್ಸವ ತಟ್ಟಿದ ಬಳ್ಳಾರಿ ಬ್ಯಾನರ್ ಬಿಸಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತದಿಂದ ಪರವಾನಗಿ ಇಲ್ಲದೇ ಪೋಸ್ಟರ್, ಬಂಟಿAಗ್ಸ್ ಕಟ್ಟಲು ನಿರ್ಬಂಧ
ಹೊಸಪೇಟೆ: ಬಳ್ಳಾರಿ ಸೇರಿ ರಾಜ್ಯದ ಕೆಲವು ಕಡೆಗಳಲ್ಲಿ ಬ್ಯಾನರ್ ಕಟ್ಟುವ ಸಂಬAಧ ಉಂಟಾಗಿದ್ದ ಗಲಭೆ, ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೂ ತಟ್ಟಿದೆ. ಸರ್ಕಾರಿ ಹೋಲ್ಡಿಂಗ್ಸ್, ಜಿಲ್ಲಾಡಳಿತ ಅಧೀಕೃತ ಪರವಾನಗಿ ನೀಡಿದ ಬ್ಯಾನರ್ ಬಿಟ್ಟು ಉಳಿದರ‍್ಯಾರು ಅನಧಿಕೃತ ಬ್ಯಾನರ್ ಕಟ್ಟದಂತೆ ನಿರ್ಬಂಧ ಹೇರಿದೆ.
ಹಂಪಿ ಉತ್ಸವದ ನಿಮಿತ್ತ ಹಂಪಿ, ಕಮಲಾಪುರ, ನಗರ ಸೇರಿದಂತೆ ಹೊರವಲಯದ ಸುರಂಗ ಮಾರ್ಗವೂ ದೀಪಾಲಂಕಾರಗಳಿAದ ಕಂಗೊಳಿಸುತ್ತಿದೆ. ಆದರೆ ಪ್ರತಿ ಬಾರಿಯಂತೆ ರಾಜಕಾರಣಿಗಳ ಫೋಟೊ ಹೊತ್ತ ಬ್ಯಾನರ್‌ಗಳ ಅಬ್ಬರ ಕಡಿಮೆಯಾಗಿದೆ. ದೊಡ್ಡವರಿಂದ ಹಿಡಿದು ಚಿಕ್ಕವರವರೆಗಿನ ರಾಜಕಾರಣಿಗಳ ಬ್ಯಾನರ್ ಹಾವಳಿಗೆ ಸ್ವತಃ ಜಿಲ್ಲಾಡಳಿತವೇ ಕಡಿವಾಣ ಹಾಕಿದೆ.
ಇತ್ತೀಚೆಗೆ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲೇ ವಾಲ್ಮೀಕಿ ಮಹರ್ಷಿ ಪುತ್ಥಳಿ ಅನಾವರಣ ಕಾರ್ಯಕ್ರಮ ಸಂಬAಧ ನಡೆದ ಬ್ಯಾನರ್ ಗಲಭೆ ವಿಚಾರಕ್ಕೆ ಎರಡು ರಾಜಕೀಯ ಪಕ್ಷದ ಕಾರ್ಯಕರ್ತರ ನಡುವೆ ಗಲಭೆ ನಡೆದಿತ್ತು. ಗುಂಡಿನ ದಾಳಿಯಿಂದಾಗಿ ಒಬ್ಬನ ಸಾವು ಕೂಡ ಆಗಿತ್ತು. ಶಿಡ್ಲಘಟ್ಟದಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಅಲ್ಲಿನ ಮುಖ್ಯಧಿಕಾರಿ ಮೇಲೆ ಕಾಂಗ್ರೆಸ್ ಮುಖಂಡರೊಬ್ಬರು ಅವಾಚ್ಯವಾಗಿ ನಿಂಧಿಸಿದ್ದರು. ಈ ಘಟನೆ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದೇ ಕಾರಣಕ್ಕೆ ಈ ಬಾರಿ ಹಂಪಿ ಉತ್ಸವದಲ್ಲಿ ಎಲ್ಲೂ ಅನಧಿಕೃತ ಬ್ಯಾನರ್ ಕಟ್ಟದಂತೆ ನಿರ್ಬಂಧಿಸಲಾಗಿದೆ. ಜಿಲ್ಲಾಡಳಿತ ಅನುಮತಿ ನೀಡಿದ ಕಡೆ ಮತ್ತು ಜಿಲ್ಲಾಡಳಿತ ನಿರ್ದೇಶಿತ ಬ್ಯಾನರ್‌ಗಳನ್ನು ಕಟ್ಟಲು ಮಾತ್ರ ಅವಕಾಶ ನೀಡಲಾಗಿದೆ.

ಉಪವಿಭಾಗಿಯಾಧಿಕಾರಿ ಆದೇಶ

ಹೊಸಪೇಟೆ ನಗರ ಪ್ರದೇಶ, ಹಂಪಿ, ಕಮಲಾಪುರ ಸೇರಿ ನಗರ, ಪಟ್ಟಣ, ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಬ್ಯಾನರ್, ಕಟೌಟ್, ಬಂಟಿAಗ್ಸ್ಗಳನ್ನು ಕಟ್ಟದಂತೆ ನೋಡಿಕೊಳ್ಳಲು ಅಧಿಕೃತ ಆದೇಶ ಹೊರಡಿಸಲಾಗಿದೆ. ಜ.30 ರಂದು ಇಲ್ಲಿನ ಉಪವಿಭಾಗಧಿಕಾರಿ ಹೊರಡಿಸಿದ ಆದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಬ್ಯಾನರ್, ಹೋರ್ಡಿಂಗ್, ಫ್ಲೇಕ್ಸ್, ಪೋಸ್ಟರ್‌ಗಳು ಹಾಗೂ ಇತರೆ ಜಾಹೀರಾತು ಸಾಮಗ್ರಿಗಳನ್ನು ಸ್ಥಾಪಿಸುವುದು ದಂಡನೀಯ ಅಪರಾಧವಾಗಿರುತ್ತದೆ. ಕರ್ನಾಟಕ ಪುರಸಭೆ ಕಾಯಿದೆ 1964 ಹಾಗೂ ಅನ್ವಯವಾಗುವ ಇತರೆ ಕಾಯಿದೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಆಯಾ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಅನಧಿಕೃತ ಬ್ಯಾನರ್ ಬಗ್ಗೆ ನಿಗಾ ವಹಿಸುವಂತೆಯೂ ಆದೇಶಲ್ಲಿ ಸೂಚಿಸಲಾಗಿದೆ.