ಹನುಮನಾಯ್ಕ 
ವಿಜಯನಗರ

ಒಳಮೀಸಲಾತಿ ವಿರೋಧಿಸಿ ಬೆಳಗಾವಿ ಚಲೋ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಗೋರ್ ಬಂಜಾರ್ ಮಳಾವ್ ಜಿಲ್ಲಾ ಅಧ್ಯಕ್ಷ ಹನುಮನಾಯ್ಕ ಸುದ್ದಿಗೋಷ್ಠಿ
ಹೊಸಪೇಟೆ: ಒಳ‌ಮೀಸಲಾತಿ ವಿರೋಧಿಸಿ ಡಿ.17 ರಂದು ಬೋವಿ, ಕೊರಮ, ಕೊರಚ, ಲಂಬಾಣಿ ಸಮುದಾಯಗಳು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಗೋರ್ ಬಂಜಾರ್ ಮಳಾವ್ ಜಿಲ್ಲಾ ಅಧ್ಯಕ್ಷ
ಹನುಮನಾಯ್ಕ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಮಾತನಾಡಿ, ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಬೇರ್ಪಡಿಸಲು ಒಳಮೀಸಲಾಯಿ ಹೆಸರಿನಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ. ಒಳ ಮೀಸಲಾಯಿಯನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ಮುಂದು ವರೆದಿದೆ. ಆದರೂ, ಸಿಎಂ ಸಿದ್ದರಾಮಯ್ಯ ಸೌಜನ್ಯಕ್ಕಾದರೂ ಸಮುದಾಯಗಳ ಸಭೆ ಕರೆದಿಲ್ಲ. ಈಗ ಎಸ್ಸಿಯಲ್ಲಿ ಎ, ಬಿ, ಸಿ ಎಂದು ಗುಂಪು ಮಾಡಿ, ವಿಂಗಡಣೆ ಮಾಡಿದೆ‌‌. ಶೇ.05ರಷ್ಟು ನೀಡುವ ಒಳ‌ಮೀಸಲಾತಿ ನೀಡಿದೆ. ಜತೆಗೆ ಅಲೆಮಾರಿಗಳನ್ನು ಸೇರಿಸಿ ಇನಷ್ಟು ಗೊಂದಲಕ್ಕೆ ಮಾಡಿದೆ. ರಾಜ್ಯಾದ್ಯಾಂತ ವಿವಿಧ ರೀತಿಯಲ್ಲಿ ಹೋರಾಟ ನಡೆಯುತ್ತಿದೆ. ಇನ್ನೂ ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ರೀತಿಯಲ್ಲಿ ಸಮುದಾಯದ ಜನರು ಬೆಂಬಲಿಸಿ ಭಾಗ ವಹಿಸಬೇಕು ಎಂದು ಆಗ್ರಹಿಸಿದರು.
ಸೇವಾಲಾಲ್ ಶಕ್ತಿ ಪೀಠ ತಿಪ್ಪೇಸ್ವಾಮಿ ಸ್ವಾಮೀಜಿ, ಪ್ರಮುಖರಾದ ಉದಯಕುಮಾರ್, ಅಲೋಕ್ ನಾಯ್ಕ, ಬೋವಿ, ಭಾಗ್ಯ, ಚಂದ್ರ, ಪುಟ್ಟನಾಯ್ಕ, ಸ್ಚಾಮಿನಾಯ್ಕ, ರಾಜನಾಯ್ಕ ಇತರರಿದ್ದರು.