ಹರಪನಹಳ್ಳಿಯಲ್ಲಿ ತಾಲೂಕು ಕ್ರೀಡಾಂಗಣ ಪಕ್ಕದಲ್ಲಿರುವ ಅಯ್ಯನಕೆರೆ ಸ್ವಚ್ಛತಾ ಕಾರ್ಯವನ್ನು ನಗರಸಭೆಯಿಂದ ಮಂಗಳವಾರ ಕೈಗೊಳ್ಳಲಾಯಿತು.  
ವಿಜಯನಗರ

ನಗರಸಭೆಯಿಂದ ಅಯ್ಯನಕೆರೆ ಸ್ವಚ್ಛತಾ ಕಾರ್ಯ

ಹರಪನಹಳ್ಳಿ: ನಗರದ ತಾಲೂಕು ಕ್ರೀಡಾಂಗಣದ ಪಕ್ಕದಲ್ಲಿರುವ ಐತಿಹಾಸಿಕ ಅಯ್ಯನಕೆರೆ ಸ್ವಚ್ಛತಾ ಕಾರ್ಯವನ್ನು ನಗರಸಭೆ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಬೇಸಿಗೆ ನಿಮಿತ್ತ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಘನತ್ಯಾಜ್ಯ ತೆರವು ಕಾರ್ಯಾಚರಣೆ ಮಾಡಲಾಯಿತು. 27 ಹೆಕ್ಟೇರ್ ಪ್ರದೇಶ ವಿಸ್ತಿರ್ಣ ಹೊಂದಿರುವ ಕೆರೆಯು ಸ್ವಚ್ಚತೆಗೆ 30ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ನಿಯೋಜಿಲಾಗಿದೆ. ನಗರದ ಪ್ರಮುಖ ಬಡಾವಣೆಗಳಿಂದ ಹರಿದು ಬರುವ ಚರಂಡಿ ನೀರು ಕೆರೆಯಲ್ಲಿ ಸಂಗ್ರಹವಾಗಿ ಮಲೀನವಾಗಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಕೆರೆಗೆ ಎಸೆಯುವ ಕಾರಣ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ.
ಅಯ್ಯನಕೆರೆ ಪಕ್ಕದಲ್ಲಿಯೇ ಕ್ರೀಡಾಂಗಣವಿದ್ದು, ನಿತ್ಯ ನೂರಾರು ಸಾರ್ವಜನಿಕರು ವಾಯುವಿಹಾರಕ್ಕೆ ಬರುತ್ತಾರೆ. ಕೆರೆಯ ದುರ್ವಾಸನೆಯಿಂದ ವಾಯುವಿಹಾರಿಗಳಿಗೆ ತೊಂದರೆ ಆಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕೆರೆಯ ಸೌಂದರೀಕರಣ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ಪೌರಾಯುಕ್ತೆ ರೇಣುಕಾ ಎಸ್.ದೇಸಾಯಿ ತಿಳಿಸಿದರು.