ಶನಿವಾರ ಬೆಲೆಯ ಯಥಾಸ್ಥಿತಿ ಬೋರ್ಡ್ ಅಳವಡಿಸಿರುವುದು
- ಎಫ್‌ಕೆಎಆರ್‌ಡಿಯು ಸಂಘಟನೆ ಹೋರಾಟದಿಂದ 99.95 ರೂ. ಇದ್ದ ಬೆಲೆ 84.95 ರೂ.ಗೆ ಇಳಿಕೆ
ಹೊಸಪೇಟೆ: ತಾಲೂಕಿನ ಡ್ಯಾಮ್ ರಸ್ತೆಯಲ್ಲಿರುವ ಆಟೋ ಎಲ್‌ಪಿಜಿ ಗೋ ಗ್ಯಾಸ್ ಬಂಕ್‌ನಲ್ಲಿ 15 ರೂ. ಧರ ಏರಿಕೆ ಮಾಡಿದರು. ನಂತರ ಎಫ್‌ಕೆಎಆರ್‌ಡಿಯು ಸಂಘಟನೆ ಸಂಚಾಲಕ ಕೆ.ಎಂ.ಸAತೋಷ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮತ್ತೆ ಧರ ಯಥಾಸ್ಥಿತಿ ಕಾಯ್ದಿದುಕೊಂಡರು.
84.95 ರೂಪಾಯಿ ಇದ್ದ ಒಂದು ಲೀಟರ್ ಆಟೋ ಗೋ ಗ್ಯಾಸ್ ಬೆಲೆಯನ್ನು ಶುಕ್ರವಾರ 99.95 ರೂಪಾಯಿಗೆ ಏರಿಸಿಸಲಾಗಿತ್ತು. ಗೋ ಗ್ಯಾಸ್ ಕಂಪನಿಯ ವಿರುದ್ಧ ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ಎಫ್‌ಕೆಎಆರ್‌ಡಿಯು) ತಾಲೂಕು ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸಲಾಗಿತ್ತು.
ಈ ವೇಳೆ ಡಿವೈಎಸ್ಪಿ ಡಾ.ಟಿ.ಮಂಜುನಾಥ್ ನೇತೃತ್ವದಲ್ಲಿ ಕಂದಾಯ ಹಾಗೂ ಆಹಾರ ಇಲಾಖೆಯಿಂದ ಗ್ಯಾಸ್ ಬಂಕ್ ಮಾಲಿಕರೊಂದಿಗೆ ಮಾತುಕತೆ ನಡೆಸಿದರು. ಕಾನೂನು ವಿರುದ್ಧವಾಗಿ ಯಾವುದೇ ರೀತಿಯ ಬೆಲೆ ಏರಿಕೆ ಮಾಡಬಾರದು ಎಂದು ಅಧಿಕಾರಿಗಳು ತಾಕೀತು ಮಾಡಿದರು. ಗ್ಯಾಸ್ ಬಂಕ್ ನಲ್ಲಿ ಆಟೋ ಎಲ್‌ಪಿಸಿ ಬೆಲೆ 84.95 ರೂಪಾಯಿಗೆ ಇಳಿಸಲಾಯಿತು. ಇದರಿಂದ ಎಫ್‌ಕೆಎಆರ್‌ಡಿಯು ಹೋರಾಟದಿಂದ ಹಿಂದೆ ಸರೆಯಿತು.