ಹರಪನಹಳ್ಳಿ ತಾಲೂಕಿನ ಹರಿಯಮ್ಮನ ಹಳ್ಳಿ ಗ್ರಾಮಸ್ಥರು ಕಳಪೆ ಗುಣಮಟ್ಟದ ಡಾಂಬರ್ ಕಿತ್ತು ಹಾಕುತ್ತಿರುವುದು. 
ವಿಜಯನಗರ

ಕೈಯಿಂದಲೇ ಕೀಳುತ್ತೆ ಡಾಂಬರ್!

ಶಾಮಸುಂದರ್ ಕೊಪ್ಪಳಕರ್

ಹರಪನಹಳ್ಳಿ: ಕೆಕೆಆರ್‌ಡಿಬಿ ಯೋಜನೆಯಡಿ ತಾಲೂಕಿನ ಹರಿಯಮನಹಳ್ಳಿಯಿಂದ ಜೋಶಿಲಿಂಗಾಪುರ ರಸ್ತೆ ಕಾಮಗಾರಿ ಕಳಪೆ ಆಗಿರುವುದನ್ನು ಸಾಬೀತು ಪಡಿಸಲು ಸ್ಥಳೀಯರು ರಸ್ತೆಗೆ ಹಾಕಿದ್ದ ಡಾಂಬರ್ ಕಿತ್ತು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

4.1 ಕಿ.ಮಿ ಉದ್ದದ ರಸ್ತೆ ಕಾಮಗಾರಿ ಕಳೆದ ಫೆ 10ಕ್ಕೆ ಪೂರ್ಣಗೊಂಡಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 1.80 ಕೋಟಿ ರೂ. ವ್ಯಯಿಸಲಾಗಿದೆ. ಕೇವಲ ಬಿಲ್ ಎತ್ತುವಳಿಗಾಗಿ ಕಾಮಗಾರಿ ನಿರ್ವಹಿಸಿದ್ದರಿಂದ ರಸ್ತೆಗೆ ಹಾಕಿರುವ ಡಾಂಬರ್ ಕೈಯಿಂದಲೇ ಕಿತ್ತುಬರುತ್ತಿದೆ. ಈ ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳನ್ನು ಅಮಾನತುಗೊಳಿಸಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.