ಹೊಸಪೇಟೆಯಲ್ಲಿ ಗುರುವಾರ ಡಿವೈಎಫ್ಐ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು. ಡಿವೈಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಅಧ್ಯಕ್ಷ ವಿ.ಸ್ವಾಮಿ, ಉಪಾಧ್ಯಕ್ಷರಾದ ಬಂಡೆ ತಿರುಕಪ್ಪ, ಅಲ್ತಾಫ್ ಇತರರಿದ್ದರು. 
ವಿಜಯನಗರ

ಅನ್ನಭಾಗ್ಯ ಅಕ್ಕಿ-ರಾಗಿ ಅಕ್ರಮ ಸಾಗಣೆ ಕಡಿವಾಣಹಾಕಿ

ಪ್ರಮುಖ ಮುಖ್ಯಾಂಶಗಳು

  • ಡಿವೈಎಫ್‌ಐ ಸಂಘಟನೆಯಿAದ ಜಿಲ್ಲಾಧಿಕಾರಿಗೆ ಮನವಿ
ಹೊಸಪೇಟೆ: ಸರ್ಕಾರ ಬಡವರಿಗಾಗಿ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿರುವುದನ್ನು ತಡೆಯಬೇಕು ಹಾಗೂ ಈ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ವಿಜಯನಗರ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದೆ.
ಹೊಸಪೇಟೆ ನಗರದ ವಿವಿಧ ವಾರ್ಡ್ಗಳ ರೇಷನ್ ಅಂಗಡಿಗಳಿAದ ಪ್ರತಿ ತಿಂಗಳು ಸುಮಾರು 900 ರಿಂದ ಸಾವಿರ ಟನ್ ಅಕ್ಕಿಯನ್ನು ಕಾನೂನುಬಾಹಿರವಾಗಿ ಕೊಪ್ಪಳಕ್ಕೆ ಹಾಗೂ ರಾಗಿಯನ್ನು ಕೂಡ್ಲಿಗಿಗೆ ಸಾಗಿಸಲಾಗುತ್ತಿದೆ. ಪ್ರತಿದಿನ ಮಧ್ಯಾಹ್ನದಿಂದಲೇ ಸುತ್ತಮುತ್ತಲಿನ ಹಳ್ಳಿಗಳು ಹಾಗೂ ವಾರ್ಡ್ಗಳಿಂದ ಆಟೋ, ನಾಲ್ಕು ಚಕ್ರದ ವಾಹನಗಳು ಮತ್ತು ಬೃಹತ್ ಲಾರಿಗಳ ಮೂಲಕ ಅಕ್ರಮವಾಗಿ ಧಾನ್ಯಗಳನ್ನು ಸಂಗ್ರಹಿಸಿ ಸಾಗಿಸಲಾಗುತ್ತಿದೆ.
ಕಾನೂನಿನ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿರುವ ಈ ಕಳ್ಳಸಾಗಣೆಯಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಹಯೋಗವಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಪೊಲೀಸರು ಕೇವಲ ಕೆಲವೇ ಬಾರಿ ಹೆಸರಿಗೆ ಮಾತ್ರ ಪ್ರಕರಣ ದಾಖಲಿಸಿ ಸುಮ್ಮನಾಗಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದೆ.
ಶಾಸಕರು ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಈ ದಂಧೆಯನ್ನು ತಡೆಯಲು ವಿಫಲವಾದರೆ ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಸಂಘಟಕರು ಎಚ್ಚರಿಸಿದ್ದಾರೆ.