ಕಾನಹೊಸಹಳ್ಳಿ ಸಮೀಪದ ಸಕಲಪುರಹಟ್ಟಿ ಗ್ರಾಮದಲ್ಲಿ ಭಾನುವಾರ ದಸಂಸ ಗ್ರಾಮ ಘಟಕವನ್ನು ಡಾ.ಎನ್.ಟಿ.ಶ್ರೀನಿವಾಸ್ ಉದ್ಘಾಟಸಿದರು.  
ವಿಜಯನಗರ

ಜನರ ಹಕ್ಕುಗಳಿಗಾಗಿ ಅಂಬೇಡ್ಕರ್ ಅವಿರತ ಹೋರಾಟ

ಕಾನಹೊಸಹಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಯುವ ಸಮುದಾಯಕ್ಕೆ ಪೂರಕವಾಗಿವೆ ಎಂದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಸಕಲಪುರಹಟ್ಟಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕ ಉದ್ಘಾಟಸಿ ಭಾನುವಾರ ಮಾತನಾಡಿದರು. ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ಮತ್ತು ದಲಿತರ-ಹಿಂದುಳಿದ ಸಮುದಾಯಗಳ ಜನರ ಹಕ್ಕುಗಳಿಗಾಗಿ ಡಾ.ಅಂಬೇಡ್ಕರ್ ಅವಿರತ ಹೋರಾಟ ಮಾಡಿದರು ಎಂದರು.
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳು ಗೋಚರಿಸುವಂತಹ ಮೂಢನಂಬಿಕೆಯಿಂದ ಹೊರಬಂದು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಸಂವಿಧಾನದ ಮೂಲಕ ಈ ಎಲ್ಲರಿಗೂ ಸಮಾನ ಅವಕಾಶ ನೀಡುವ ಮೂಲಕ ತುಳಿತಕ್ಕೆ ಒಳಗಾದವರ ದನಿಯಾಗಿದ್ದರು ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಚಿಂತನೆಗಳನ್ನು ಮುಂದಿಟ್ಟುಕೊಂಡು ಸಮಾನತೆಯ ಸಮಾಜದ ಕನಸನ್ನು ನನಸು ಮಾಡಬೇಕಿದೆ. ವಿಶೇಷವಾಗಿ ಮಹಿಳೆಯರ ಪರವಾಗಿ ಧ್ವನಿ ಎತ್ತಿ ಅವರಿಗೂ ದುಡಿಯಲು ಸಮಾಜದಲ್ಲಿ ಅವಕಾಶ ಕಲ್ಪಿಸಿದ್ದರು. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನ ಪಾಲಿಸುವ ಮೂಲಕ ಉತ್ತಮ ನಾಗರಿಕ ಸಾಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದರು.
ಬಾಬು ಜಗಜೀವನರಾಮ್ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಿಗಿ ನಾಗರಾಜ್ ಮಾತನಾಡಿ, ಅಂಬೇಡ್ಕರ್ ಹಾಗೂ ಪ್ರೊ ಬಿ ಕೃಷ್ಣಪ್ಪ ಅವರ ವಿಚಾರ ಹಾಗೂ ದಲಿತ ಸಂಘಷರ್ ಸಮಿತಿ ನಡೆದು ಬಂದ ವಿಚಾರಧಾರೆ ಬಗ್ಗೆ ತಿಳಿಸಿದರು. ಸಿದ್ದಯ್ಯನಕೋಟೆ ಇಳಕಲ್ಲು ವಿಜಯ ಮಹಾಂತೇಶ್ವರ ಶಾಖಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಸಂಚಾಲಕ ಎಸ್.ದುರುಗೇಶ್, ಜಿಲ್ಲಾ ಸಂಘಟನಾ ಸಂಚಾಲಕರಾದ ಕಂದಗಲ್ ಪರಶುರಾಮ, ಬಿಟಿ ಗುದ್ದಿ ದುರುಗೇಶ, ಏಳೆನೀರು ಗಂಗಾಧರ. ಎಎಸ್ಪಿ ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ದುರುಗಪ್ಪ , ಸಿದ್ದರಾಮ ಬಿದರಾಣಿ , ಬಳ್ಳಾರಿ ಜಿಲ್ಲಾ ಸಂಚಾಲಕ ಜಿ.ಗೋವರ್ಧನ್, ಹುಡೇಂ ಕೃಷ್ಣಮೂರ್ತಿ, ಡಿ.ಒ.ಮುರಾರ್ಜಿ, ಬಡೇಲಡಕು ದುರುಗೇಶ್, ಡಿ.ಎಂ.ಈಶ್ವರಪ್ಪ ಸಿದ್ದಾಪುರ, ಮಹಾಂತೇಶ್, ಚೌಡೇಶ್, ಕಾನಮಡುಗು ದುರುಗಪ್ಪ, ಲೋಕಿಕೆರೆ ಕರಿಬಸಪ್ಪ ,ಪಕೀರಪ್ಪ ಟಿ.ಕರಿಬಸಪ್ಪ. ಹೊಸಹಳ್ಳಿ ಮಲ್ಲೇಶ್. ಸಕಲಪುರದಹಟ್ಟಿ ಗ್ರಾಮಸ್ಥರು ಇದ್ದರು.