ಹೊಸಪೇಟೆ ಚಿತ್ತವಾಡ್ಗಿ ಕಾಲೇಜಿನಲ್ಲಿ ಪಿಯು ಪರೀಕ್ಷಾ ಕೇಂದ್ರಕ್ಕೆ ಡಿಡಿಪಿಯು ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್ ಸಿದ್ದತೆ ಪರಿಶೀಲನೆ ನಡೆಸಿದರು. 
ವಿಜಯನಗರ

ಆಲ್ ದಿ ಬೆಸ್ಟ್ ವಿದ್ಯಾರ್ಥಿಗಳೇ....

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಫೆ.28ರಿಂದ ಮಾ.17 ವರೆಗೆ ಪಿಯು ಪರೀಕ್ಷೆ
  • 23 ಪರೀಕ್ಷಾ ಕೇಂದ್ರಗಳು
  • 14801 ವಿದ್ಯಾರ್ಥಿಗಳು ನೋಂದಣಿ
ಹೊಸಪೇಟೆ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆ.28ರಿಂದ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳ ಉತ್ತಮ ಫಲಿತಾಂಶದೊAದಿಗೆ ಉನ್ನತ ಸ್ಥಾನಕ್ಕೆ ಬರಲಿ ಎಂದು ಎಲ್ಲ ವಿದ್ಯಾರ್ಥಿಗಳಿಗೆ ಆಲ್ ದ ಬೆಸ್ಟ್ ಎನ್ನೋಣ....
ಜಿಲ್ಲೆಯಲ್ಲಿ 23 ಪರೀಕ್ಷಾ ಕೇಂದ್ರಗಳಲ್ಲಿ 14801 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. 7235 ಬಾಲಕಿಯರು, 5143 ಬಾಲಕರು ಸೇರಿ ಒಟ್ಟು 14801 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಈ ಪೈಕಿ ಹೊಸದಾಗಿ 12378, ಪುನರಾವರ್ತಿತರಾಗಿ 1915, ಖಾಸಗಿಯವರು 500 ಹಾಗೂ ವಿಷಯಾಧಾರಿತ ಅಂಕಗಳನ್ನು ಹೆಚ್ಚಿಸಿಕೊಳ್ಳುವ ದೃಷ್ಠಿಯಿಂದ ಮೊತ್ತೊಮ್ಮೆ 8 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ನಗರ ಸೇರಿದಂತೆ ತಾಲೂಕಿನಲ್ಲಿ 07, ಹರಪನಹಳ್ಳಿ 05, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು ತಲ 03, ಕೂಡ್ಲಿಗಿ 2 ಸೇರಿ ಒಟ್ಟು 23 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಶನಿವಾರದಿಂದ ಮಾ.17ರ ವರೆಗೆ ಪರೀಕ್ಷೆಗಳು ನಡೆಯಲಿದೆ.
ಜ.2 ರಿಂದ 17ರ ತನಕ ದ್ವಿತೀಯ ಪಿಯುಸಿ ಮೊದಲ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗಿದೆ. ಬಳಿಕ ಜ.19ರಿಂದ ಫೆ.2ರ ತನಕ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆ ನಡೆದಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಎರಡು ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ತಿಳಿಯುವ ಹಾಗೂ ಬರೆಯುವ ಅವಕಾಶ ನೀಡಲಾಗಿತ್ತು. ಎರಡು ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಶೇ.71ರಷ್ಟು ಫಲಿತಾಂಶ ಪಡೆದಿದೆ. ಇನ್ನೂ ಮುಖ್ಯ ಪರೀಕ್ಷೆಗೆ ಶೇ.80ರಷ್ಟು ಫಲಿತಾಂಶ ಪಡೆಯಲು ಇಲಾಖೆ ಪಣತೊಟ್ಟಿದೆ. ಇದಕ್ಕೂ ಮೊದಲೇ ಮೂರು ಮಾದರಿಯ ಪ್ರಶ್ನೆ ಪತ್ರಿಕೆಯನ್ನು ಇಲಾಖೆ ನೀಡಿತ್ತು. ಈ ಮೂಲಕ ವಿದ್ಯಾರ್ಥಿಗಳ ಕೈಗೆ ಐದು ಮಾದರಿ ಪ್ರಶ್ನೆ ಪತ್ರಿಕೆಗಳು ಲಭ್ಯವಾಗಿಸಿ ಅಂಕ ಗಳಿಕೆಯನ್ನು ಸಲೀಸು ಮಾಡಿದೆ.

ಪಾಸ್ ಆಗುವ ಸುತ್ರ ಸುಲಭ

ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಗೆ ಮೊದಲೇ ಎರಡು ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಅಭ್ಯಸಿಸುವ ಅವಕಾಶವನ್ನು ಇಲಾಖೆ ಈಗಾಗಲೇ ನೀಡಿದ್ದು, ಪರೀಕ್ಷೆ ಗೆಲ್ಲುವ ಹಾದಿಯನು ಸುಲಭಗೊಳಿಸಿದೆ. ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯಲ್ಲಿ 80 ರಲ್ಲಿ 24 ಅಂಕ ಬಂದರೆ ಉಳಿದಂತೆ ಇಂಟರ್‌ನಲ್ ಅಂಕದಲ್ಲಿ 10 ಬಂದರೂ ವಿದ್ಯಾರ್ಥಿಗಳ 34 ಅಂಕ ಗ್ಯಾರಂಟಿಯಾಗುತ್ತದೆ. ಉಳಿದ ಎಲ್ಲ ವಿಷಯಗಳು ಸೇರಿದಾಗ ಶೇ.33 ಬಂದರೆ ವಿದ್ಯಾರ್ಥಿ ಉತ್ತೀರ್ಣರಾಗುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಇಲಾಖೆ ಮಾಡಿಕೊಟ್ಟಿದ್ದು, ವಿದ್ಯಾರ್ಥಿಗೆ ಇದು ಗೆಲ್ಲುವ ಸೂತ್ರ ಆಗಲಿದೆ.

ಶೇ.80 ಫಲಿತಾಂಶದ ಗುರಿ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಜಿಲ್ಲೆಗೆ ಶೇ.80ರಷ್ಟು ಫಲಿತಾಂಶ ಪಡೆಯಲು ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗ ಹಲವು ಸೂತ್ರಗಳಡಿ ಕಾರ್ಯಕ್ರಮ ರೂಪಿಸಿದೆ. 2024ರಲ್ಲಿ ಶೇ.70ರಷ್ಟು ಅಂಕ ಪಡೆದು ರಾಜ್ಯದಲ್ಲಿ 25ನೇ ಸ್ಥಾನ ಇದ್ದ ವಿಜಯನಗರ, ಕಳೆದ ಬಾರಿ ಪರೀಕ್ಷೆಯಲ್ಲಿ ಶೇ.67.4ರಷ್ಟು ಅಂಕಗಳನ್ನು ಪಡೆದು ಜಿಲ್ಲೆಗೆ 27ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ, ಈ ಬಾರಿ 10ರೊಳಗಿನ ಸ್ಥಾನ ಪಡೆಯಬೇಕೆಂಬ ಗುರಿಯೊಂದಿಗೆ ಆರಂಭದಿAದಲೇ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
"

ಶನಿವಾರದಿಂದ ಮಾ.17 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ದತೆ ಕೈಗೊಂಡಿದೆ. ಪರೀಕ್ಷಾ ಪಾವಿತ್ರ‍್ಯತೆಗೆ ಧಕ್ಕೆಯಾಗದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರ ಜತೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಮುಖ್ಯಸ್ಥರು ಹೊರತುಪಡಿಸಿ ಉಳಿದವರಿಗೆ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ.

"

14801 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ನೊಂದಣಿ ಆಗಿದ್ದಾರೆ. ಎರಡು ಪೂರ್ವ ಸಿದ್ದತೆ ಪರೀಕ್ಷೆಯಲ್ಲಿ ಶೇ.71ರಷ್ಟು ಫಲಿತಾಂಶ ಬಂದಿದೆ. 80ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಿದ್ದೆವೆ. ಇಂದಿನಿAದ ಪರೀಕ್ಷೆ ಆರಂಭ ಆಗಲಿದ್ದು, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಿದ್ದೇವೆ.