ಕೊಟ್ಟೂರಿನ ತಾಲೂಕು ಕಚೇರಿಯಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತಿ ಆಚರಿಸಲಾಯಿತು.  
ವಿಜಯನಗರ

ಅಹಂಕಾರ ಬಿಟ್ಟರೆ ಸಾಧನೆ ಸಾಧ್ಯ

ಕೊಟ್ಟೂರು: ತೋರಿಕೆಯ ಬಾಹ್ಯ ಪೂಜೆಗಿಂತ ಮಾನಸಿಕ ಪೂಜೆ ಶ್ರೇಷ್ಠ ಎನ್ನುವ ಸಂದೇಶವನ್ನು ಕೈವಾರ ತಾತಯ್ಯ ತಿಳಿಸಿದ್ದಾರೆ ಎಂದು ತಹಸೀಲ್ದಾರ್ ಅಮರೇಶ ಜಿ.ಕೆ. ಹೇಳಿದರು.
ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಗುರುಸ್ಮರಣೆ ಮಾಡುತ್ತಿದ್ದರೆ ನಮ್ಮೊಳಗೆ ಚಿಂತನೆ ಆರಂಭವಾಗುತ್ತದೆ. ಮನುಷ್ಯನ ದೊಡ್ಡ ಶತ್ರು ಅಹಂಕಾರವಾಗಿದ್ದು, ಅಹಂಕಾರ ಕಳೆದುಕೊಂಡರೆ ಸಾಧಕರಾಗಬಹುದು ಎಂಬುದನ್ನು ಕೈವಾರ ತಾತಯ್ಯ ತಿಳಿಸಿದ್ದಾರೆ. ಶ್ರೀ ಯೋಗಿ ನಾರೇಯಣ ಯತೀಂದ್ರರು ಕಾಲಜ್ಞಾನ ಕೃತಿ ರಚಿಸಿದ್ದು, ಈ ಕೃತಿ ಇಂದಿಗೂ ಪ್ರಸಿದ್ಧಿ ಹೊಂದಿದೆ. ಇಂತಹ ಮಹಾನ್‌ಚೇತನರು ನೀಡಿದ ಸಂದೇಶಗಳನ್ನ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ತಾಲೂಕು ಬಲಿಜ ಸಮಾಜದ ಅಧ್ಯಕ್ಷ ಹರೀಶ್, ಪ್ರಮುಖರಾದ ಪಿ.ಬಾಬಯ್ಯ, ನಾರಾಯಣಪ್ಪ, ಪಿ.ಕೊಟ್ರೇಶ್, ಗೋಪಾಲ, ಮುರಳಿ, ಪ್ರಶಾಂತ, ಪ್ರವೀಣ ಕುಮಾರ್, ಕಿರಣ್ ಕುಮಾರ್, ಶಿರಸ್ತೇದಾರರಾದ ಅನ್ನದಾನೇಶ ಬಿ.ಪತ್ತಾರ್, ಎಚ್.ಎಂ.ಕೊಟ್ರಮ್ಮ, ಚಂದ್ರನಾಯ್ಕ, ಕಂದಾಯ ನಿರೀಕ್ಷಕ ಡಿ.ಶಿವಕುಮಾರ್, ಸಿಬ್ಬಂದಿ ಮಂಜುನಾಥ, ದೇವರಾಜ ಅರಸು, ಮಂಜಮ್ಮ, ಗೌರಮ್ಮ, ಗ್ರಾಮ ಆಡಳಿತ ಅಧಿಕಾರಿ ರಮೇಶ್, ಜ್ಯೋತಿಬಾಯಿ, ಸಿ.ಮ.ಗುರುಬಸವರಾಜ ಮುಂತಾದವರು ಇದ್ದರು.