ರಾಮಸಾಗರ ಗ್ರಾಮದಲ್ಲಿ ರೇಷ್ಮೆ ಕೃಷಿ ತರಬೇತಿ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ತಾಪಂ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ ಪ್ರಮಾಣಪತ್ರ ವಿತರಿಸಿದರು. ಅಧಿಕಾರಿಗಳಾದ ರಾಜೇಂದ್ರ, ಅಪೂರ್ವ, ಹಾಲಪ್ಪ, ಮಲ್ಲಿಕಾರ್ಜುನ, ಕೆ.ಲಲಿತಮ್ಮ ಇತರರಿದ್ದರು.
- ರೇಷ್ಮೆ ಕೃಷಿ ತರಬೇತಿ
- ಕಂಪ್ಲಿ ತಾಪಂ ಎಡಿ ಕೆ.ಎಸ್.ಮಲ್ಲನಗೌಡ ಸಲಹೆ
ಕಂಪ್ಲಿ: ರೇಷ್ಮೆ ಉತ್ಪಾದನೆ ಮತ್ತು ಮಾರುಕಟ್ಟೆ ರೂಪಿಸುವಲ್ಲಿ ರಾಮನಗರವನ್ನು ಮೀರಿಸುವಂತಾಗಬೇಕು ತಾಪಂ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ ಹೇಳಿದರು.
ರಾಮಸಾಗರ ಗ್ರಾಮದಲ್ಲಿ ಶುಕ್ರವಾರ ರೇಷ್ಮೆ ಕೃಷಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ರೇಷ್ಮೆ ಕೃಷಿ ಉತ್ಪಾದನೆಯಲ್ಲಿ ರಾಮಸಾಗರದ ರೇಷ್ಮೆ ಬೆಳೆಗಾರರು ಉತ್ತಮ ಸಾಧನೆ ಮಾಡಬೇಕಿದೆ. ರೇಷ್ಮೆ ಇಲಾಖೆ ಮತ್ತು ನರೇಗಾ ಯೋಜನೆಯ ಸೌಲಭ್ಯಗಳನ್ನು ಬಳಸಿಕೊಂಡು ಗುಣಮಟ್ಟದ ರೇಷ್ಮೆ ಉತ್ಪಾದಿಸಿ, ಮಾರುಕಟ್ಟೆ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಎನ್‌ಆರ್‌ಎಲ್‌ಎಂ ಯೋಜನೆಯಡಿ ನಡೆದ 10 ದಿನಗಳ ರೇಷ್ಮೆ ಕೃಷಿ ತರಬೇತಿ ಪೂರ್ಣಗೊಳಿಸಿದ 35 ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜಿಪಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ, ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕಿ ಅಪೂರ್ವ, ರೇಷ್ಮೆ ಸಹಾಯಕ ನಿರ್ದೇಶಕ ಹಾಲಪ್ಪ, ಪಿಡಿಒ ಮಲ್ಲಿಕಾರ್ಜುನ, ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕೆ.ಲಲಿತಮ್ಮ, ಮಾಜಿ ಅಧ್ಯಕ್ಷೆ ಆರ್.ಶಾಂತಲಾ, ಬಳ್ಳಾರಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ತರಬೇತುದಾರ ದಿನೇಶ್, ತಾಲೂಕು ಸಂಯೋಜಕಿ ಪಾರ್ವತಿ, ರಾಜೀವ್‌ಗಾಂಧಿ ಫೆಲೋ ಸಲ್ಮಾಬೇಗಂ, ಎಬಿಪಿ ಸಂಯೋಜಕ ಬಸವನಗೌಡ, ತಾಪಂ ಸಿಬ್ಬಂದಿ ಇದ್ದರು.