ಹೊಸಪೇಟೆಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ತಿಪ್ಪೇಸ್ವಾಮಿ, ಅಲ್ಲಾ ಭಕ್ಷಿ, ಅಂಜಿನಿ, ಪರಶುರಾಮ, ಮೈಲಾರಪ್ಪ, ಸಂಗಪ್ಪ, ರುಕ್ಸಾನ, ಹಾಜೀರಾ, ಸ್ವಪ್ನಾ, ಗಂಗಮ್ಮ, ಪರ್ವಿನ್, ಲಕ್ಷ್ಮೀ, ಸೋಮಕ್ಕೆ, ಕಾಳಮ್ಮ, ತಾಯಮ್ಮ, ಲಕ್ಷ್ಮಕ್ಕ, ಯಂಕಪ್ಪ, ರೀಟಾ, ಪ್ರಿಯಾ, ಧಜರೀನ್, ಭುವನೇಶ್ವರಿ , ಮೇರಿ, ಜೆನ್ನಿಫರ್, ಸೆಲ್ವಿ, ಶೀಲಾ, ಮನಿಷಾ, ಪಾಂಡ್ಯನ್, ಇತರರಿದ್ದರು. 
ವಿಜಯನಗರ

ಕಾನೂನು ದುರುಪಯೋಗ, ಸೇಡಿನ ರಾಜಕಾರಣ

ಪ್ರಮುಖ ಮುಖ್ಯಾಂಶಗಳು

  • ರಾಹುಲ್ ಗಾಂದಿ ಮೇಲಿನ ಎಫ್‌ಐಆರ್ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕಾರ್ಯಕರ್ತರ ಆಗ್ರಹ
ಹೊಸಪೇಟೆ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿ ನಗರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಎಐಸಿಸಿ ಅಧ್ಯಕ್ಷರು ಭಾಷಣ ಮಾಡಿದ ಸ್ಥಳವನ್ನು ಬಿಜೆಪಿ ಕಾರ್ಯಕರ್ತರು ಶುದ್ಧೀಕರಣ ಮಾಡುವ ಮೂಲಕ ದೇಶದ ಸಮಸ್ತ ದಲಿತ ಸಮುದಾಯಕ್ಕೆ ಹಾಗೂ ಸಂವಿಧಾನದ ಮೌಲ್ಯಗಳಿಗೆ ಘೋರ ಅಪಮಾನ ಎಸಗಿದ್ದಾರೆ. ಇಂತಹ ಜಾತಿವಾದಿ ಕೃತ್ಯವೆಸಗಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಘಟನೆಯನ್ನು ಖಂಡಿಸಿದ ರಾಹುಲ್ ಗಾಂಧಿ ವಿರುದ್ಧವೇ ದೂರು ದಾಖಲಿಸಿರುವುದು ಬಿಜೆಪಿಯ ಸೇಡಿನ ರಾಜಕಾರಣಕ್ಕೆ ಸಾಕ್ಷಿ ಎಂದು ಕಾರ್ಯಕರ್ತರು ಕಿಡಿಕಾರಿದರು.
ಉತ್ತರಾಖಂಡದ ಬಿಜೆಪಿ ಸರ್ಕಾರವು ಪೊಲೀಸರನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ರಾಹುಲ್ ಗಾಂಧಿ ಅವರ ಮೇಲಿನ ಪ್ರಕರಣವು ಇಡೀ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ದಾಳಿಯಾಗಿದೆ. ಕೂಡಲೇ ಸುಳ್ಳು ಎಫ್‌ಐಆರ್ ಹಿಂಪಡೆದು, ಶುದ್ಧೀಕರಣದ ಹೆಸರಿನಲ್ಲಿ ದಲಿತ ವಿರೋಧಿ ಕೃತ್ಯವೆಸಗಿದ ತಪ್ಪಿತಸ್ಥ ಬಿಜೆಪಿ ಕಾರ್ಯಕರ್ತರು ಹಾಗೂ ಪಕ್ಷಪಾತಿಯಾಗಿ ವರ್ತಿಸಿದ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.