ಡಿಜಿಟಲ್ ಯುಗದಲ್ಲಿ ಸರ್ಕಾರಿ ಅಥವ ಖಾಸಗಿ ವಲಯವಾಗಲಿ, ಯಾವುದೇ ಸೌಲಭ್ಯ ಆಧಾರ್ ಕಾರ್ಡ್ ಕಡ್ಡಾಯ. ಆದರೆ, ತಾಲೂಕಿನ ಧರ್ಮಸಾಗರದ ಹಂಪಮ್ಮ ಎಂಬ ಬಡ ಮಹಿಳೆ ಬದುಕಿದ್ದರೂ, ಪಾಲಿಗೆ ಇದು ಮರಣ ಶಾಸನವಾಗಿದೆ. 
ವಿಜಯನಗರ

ಜೀವಂತ ಮಹಿಳೆಗೆ ಆಧಾರ್ ಪ್ರಯಾಸ

ಪ್ರಮುಖ ಮುಖ್ಯಾಂಶಗಳು

  • ಬದುಕಿದ್ದರೂ, ಸತ್ತುಹೊಗಿದ್ದಾರೆ ಧರ್ಮಸಾಗರದ ಹಂಪಮ್ಮ
ಹೊಸಪೇಟೆ: ಡಿಜಿಟಲ್ ಯುಗದಲ್ಲಿ ಸರ್ಕಾರಿ ಅಥವ ಖಾಸಗಿ ವಲಯವಾಗಲಿ, ಯಾವುದೇ ಸೌಲಭ್ಯ ಆಧಾರ್ ಕಾರ್ಡ್ ಕಡ್ಡಾಯ. ಆದರೆ, ತಾಲೂಕಿನ ಧರ್ಮಸಾಗರದ ಹಂಪಮ್ಮ ಎಂಬ ಬಡ ಮಹಿಳೆ ಬದುಕಿದ್ದರೂ, ಪಾಲಿಗೆ ಇದು ಮರಣ ಶಾಸನವಾಗಿದೆ.
ಸರ್ಕಾರಿ ಸಿಬ್ಬಂದಿಯ ಸಣ್ಣ ಬೇಜವಾಬ್ದಾರಿಯಿಂದ ಹಂಪಮ್ಮ ಯಾತನೆ ಅನುಭವಿಸುತ್ತಿದ್ದಾರೆ. ಜೀವಂತ ವಾಗಿದ್ದೇನೆ ಎಂದು ಸಾಬೀತುಪಡಿಸಲು ಈ ಮಹಿಳೆ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಅಲೆದಾಡಿದರೂ ಆಧಾರ್‌ನಲ್ಲಿ ಬದುಕುವ ಭರವಸೆ ಕಾಣುತ್ತಿಲ್ಲ. ಮತ್ತೊಂದೆಡೆ ಬದುಕಿದ್ದಾಗಲೇ ಮೃತ ಪಟ್ಟಿದ್ದಾರೆ ಎಂದು ನಮೂದಾಗಿರುವುದು ಮಾನಸಿಕವಾಗಿಯೂ ದೊಡ್ಡ ಆಘಾತ ನೀಡಿದೆ. ಸರ್ಕಾರದ ಗೃಹಲಕ್ಷ್ಮಿ, ಪಿಎಂ ಕಿಸಾನ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಸೇರಿ ಎಲ್ಲ ದಾಖಲೆಗಳೂ ಆಧಾರ್ ಸಂಖ್ಯೆಯೊAದಿಗೆ ಬೆಸೆದುಕೊಂಡಿರುವುದರಿAದ ಹಂಪಮ್ಮ ಅವರಿಗೆ ಈಗ ಆಧಾರ್ ಸಮಸ್ಯೆ ಶಾಪವಾಗಿದೆ.
ನಾನು ಬದುಕಿದ್ದೇನೆ ಎಂದರೆ ಸರ್ಕಾರಿ ಕಚೇರಿಯಲ್ಲಿ ಯಾರೂ ನಂಬುತ್ತಿಲ್ಲ. ಎಂಬುದು ಹಂಪಮ್ಮ ಅವರ ಆಗ್ರಹವಾಗಿದೆ. ತಾಂತ್ರಿಕವಾಗಿ ತಪ್ಪುಗಳಾದಾಗ ಸರಿಪಡಿಸುವ ಜವಾದ್ದಾರಿ ಇರಬೇಕು. ಅಧಿಕಾರಿಗಳು, ಸಿಬ್ಬಂದಿಗಳು ಕೇವಲ ಹಾರಿಕೆ ಉತ್ತರ ನೀಡುತ್ತಾರೆ. ತಾಲೂಕು ಕಚೇರಿಗೆ ಆಧಾರ್ ಹಿಡಿದು ಬಂದ ಹಂಪಮ್ಮ ಅವರ ಮಾತಾಗಿದೆ.

ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ

ಹಂಪಮ್ಮ ಅವರ ಮನೆಯ ಸಮೀಪದಲ್ಲಿ ವಾಸವಿದ್ದ ಅವರದ್ದೇ ಹೆಸರಿನ ಮತ್ತೊಬ್ಬ ಮಹಿಳೆ (ಹಂಪಮ್ಮ, ಗಂಡ ಎನ್. ತಿಮ್ಮಾರೆಡ್ಡಿ) 2024ರಲ್ಲಿ ಮೃತಪಟ್ಟಿದ್ದರು. ಮೃತರ ಸಾವಿನ ಮಾಹಿತಿ ದಾಖಲು ಮಾಡುವ ಸಂದರ್ಭದಲ್ಲಿ ಸ್ಥಳೀಯ ಆಡಳಿತದ ಸಿಬ್ಬಂದಿ ಹೆಸರಿನ ಸಾಮ್ಯತೆಯನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ. ಬದುಕಿರುವ ಹಂಪಮ್ಮ ಅವರ ಆಧಾರ್ ಸಂಖ್ಯೆಯನ್ನು ಮೃತ ಹಂಪಮ್ಮ ಅವರ ದಾಖಲೆಗೆ ಜೋಡಿಸಿ ಬಿಟ್ಟರು. ಅಂದಿನಿAದ ಸರ್ಕಾರಿ ದಾಖಲೆಗಳಲ್ಲಿ ಹಂಪಮ್ಮ ಮೃತರಾಗಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದರಿಂದ ಲಿಂಕ್ ಆಗಿದ್ದ ಎಲ್ಲ ಸರ್ಕಾರಿ ಸೌಲಭ್ಯಗಳು ಸ್ಥಗಿತ ನಾನು ಜೀವಂತವಾಗಿದ್ದೇನೆ, ನನ್ನ ಆಧಾರ್ ಸರಿಪಡಿಸಿಕೊಡಿ. ಯಾರೋ ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ಆಧಾರ್ ಕಾರ್ಡ್ ಜತೆಗೆ ಸಕಾಧರಿ ಯೋಜನೆಗಳಿಗೆ ಅರ್ಜಿ ಹಾಕಲು ಹೋದರೆ ನಾನು ಮೃತಪಟ್ಟಿದ್ದೇನೆ ಎನ್ನುತ್ತಿದ್ದಾರೆ. ಇದನ್ನು ಸರಿಪಡಿಸಿಕೊಡುವ ಬಗ್ಗೆ ಯಾರೂ ಮಾತಾಡುತ್ತಿಲ್ಲ.