ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು.
ಗುಡೇಕೋಟೆ (ಕಾನಹೊಸಹಳ್ಳಿ): ಒನಕೆ ಒಬವ್ವ ಉತ್ಸವದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಗುಡೇಕೋಟೆ ಗ್ರಾಮವನ್ನು ಗುರುತಿಸುವಂತಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಗ್ರಾಮದಲ್ಲಿ ಡೊಳ್ಳು ಬಾರಿಸುವ ಎರಡು ದಿನಗಳ ಒನಕೆ ಓನವ್ವ ಉತ್ಸವಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ಸರ್ಕಾರದ ಅನುದಾನ ಪಡೆದು ಉತ್ಸವ ಆಚರಣೆ ಮಾಡುತ್ತಿರುವುದು ಗ್ರಾಮಾಭಿವೃದ್ಧಿಗೆ ಪೂರಕವಾಗಿದೆ. ಗುಡೇಕೋಟೆ ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಓಬವ್ವ ಸ್ಮಾರಕ ನಿರ್ಮಾಣ ಮತ್ತು ಪಾಳೇಗಾರರ ಕಾಲದಲ್ಲಿ ನಿರ್ಮಿತವಾದ ಅನೇಕ ಸ್ಮಾರಕಗಳನ್ನು ಸಂರಕ್ಷಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವೆ. ಬರದ ನೆಲೆದಲ್ಲಿ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇದ್ದು, ಅದನ್ನು ಸ್ಮರಿಸುವ ಕೆಲಸಕ್ಕೆ ಕೈಜೋಡಿಸಬೇಕೆಂದರು.
ಕಾನಾಮಡುಗು ದಾಸೋಹಮಠದ ಧಾರ್ಮಧಿಕಾರಿ ಐಮುಡಿ ಶರಣಾರ್ಯರು, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ, ಎನ್.ತಮ್ಮಣ್ಣ, ಗುಡೇಕೋಟೆ ಪಾಳೇಗಾರ ವಂಶಸ್ಥ ಶಿವರಾಜವರ್ಮ, ಜರ್ಮಲಿ ಪಾಳೇಗಾರ ವಂಶಸ್ಥ ಸಿದ್ದಪ್ಪನಾಯಕ, ಒನಕೆ ಓಬವ್ವ ವಂಶಸ್ಥ ಕುದುರೇಡವು ರಾಜಣ್ಣ, ಶಿವಪ್ರಸಾದ್ ಗೌಡ, ರಾಘವೇಂದ್ರರಾವ್, ತಾಪಂ ಇಒ ನರಸಪ್ಪ, ಬಿಇಒ ಮೈಲೇಶ್ ಬೇವೂರು, ನಾಗರಾಜ ಕೊಟ್ಟಪ್ಪಗಳ ಇತರರಿದ್ದರು.