ಹಗರಿಬೊಮ್ಮನಹಳ್ಳಿ ಹಳೇ ಊರಿನ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  
ವಿಜಯನಗರ

ಸಹೋದರತ್ವದಿಂದ ಇರುವಂತೆ ಸಂದೇಶ

ಹಗರಿಬೊಮ್ಮನಹಳ್ಳಿ: ಬಕ್ರೀದ್ ಅಂಗವಾಗಿ ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಭಾಗದ ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಹೊಸ ಊರಿನ ಸೋನಿಯಾ ನಗರ ಹತ್ತಿರದಲ್ಲಿರುವ ಈದ್ಗಾ ಮೈದಾನ, ಹಳೇ ಊರಿನ ತಂಬ್ರಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ಸಮುದಾಯದವರು ಪಾರ್ಥನೆಯಲ್ಲಿ ಪಾಲ್ಗೊಂಡರು. ಧರ್ಮಗುರುಗಳು ಹಬ್ಬದ ವಿಶೇಷತೆ ಮತ್ತು ಆಚರಣೆ ಕುರಿತು ಬೋಧಿಸಿದರು. ತ್ಯಾಗ, ದಾನ, ಧರ್ಮದ ಮಹತ್ವ ಸಾರಿದರು. ಎಲ್ಲ ಸಮುದಾಯಗಳ ಜನರೊಂದಿಗೆ ಸಹೋದರತ್ವದಿಂದ ಇರಬೇಕು ಎಂದು ಸಾರಿದರು.
ಹಳೇ ಊರಿನ ಈದ್ಗಾ ಮೈದಾನದಲ್ಲಿ ನೂರಾನಿ ಮಸೀದಿಯ ಮುತವಲ್ಲಿ ಎಸ್.ಹಬೀಬ್ ಸಾಬ್, ಸೈಯದ್ ಯೂಸೂಫ್, ಮೆಕಾನಿಕ್ ಕರೀಂಸಾಬ್, ಅತ್ಸಾ ಮಸೀದಿಯ ಮುತವಲ್ಲಿ ಇಮಾಮ್ ಸಾಬ್, ಅಬೂಬಕ್ಕರ್ ಮಸೀದಿಯ ಮುತವಲ್ಲಿ ಬಾಬು ಜಾನ್‌ಸಾಬ್, ದೊಡ್ಡಮನಿ ಮಹಮದ್ ಸಾಬ್, ಸೈಯದ್ ಬಾಬು ಫಕೃದ್ದೀನ್, ಹುಸೇನ್ ಸಾಬ್, ಹುಮ್ಮಾರ್ ಆಸೀಸ್, ಹಸನ್ ಸಾಬ್, ಸೈಯದ್ ಮಹ್ಮದ್ ಸಾಬ್, ಖಾಸಿಂಸಾಬ್ ಇತರರಿದ್ದರು.
ಸೋನಿಯಾ ನಗರ ಹತ್ತಿರದ ಈದ್ಗಾ ಮೈದಾನದಲ್ಲಿ ಜಾಮೀಯಾ, ಬಿಲ್ಲಾಲ್, ಸೋನಿಯಾ ನಗರ, ರಾಮ್ ರಹೀಮ್ ನಗರ, ಮೆಹಬೂಬ್‌ನಗರ, ಜಾಲಿನಗರ ಮಸೀದಿಗಳ ಪ್ರಮುಖರಾದ ಹುಲ್‌ಮನಿ ಚಾಂದ್, ಪೀರಸಾಬ್, ಇಸ್ಮಾಯಿಲ್, ಎಣ್ಣಿಬಾಷಾ, ರಜಾಕ್‌ಸಾಬ್, ಜಂದಿಸಾಬ್, ಕುಲ್ಮಿ ರಹಿಮಾನ್, ಬಾಬುವಲಿ, ನೂರ್ ಅಹ್ಮದ್(ಅಬ್ಬು), ಎಣ್ಣಿ ದಾದಾ ಕಲಂದರ್, ದಾದಾಪೀರ್, ಸಿಕಂದರ್, ತತ್ತಿ ಖಾಸಿಂಸಾಬ್ , ಕೆ.ಜಿ.ಎನ್.ಅಲ್ಲಾಭಕ್ಷಿ, ಸಿ.ಭಾಷಾಸಾಬ್ ಇತರರಿದ್ದರು.