ಕಾನಹೊಸಹಳ್ಳಿಯಲ್ಲಿ ಮಾದಿಗ ದಂಡೋರ ಗ್ರಾಮ ಘಟಕದಿಂದ ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು.  
ವಿಜಯನಗರ

ಕಾರ್ಮಿಕರ ಪರ ಧ್ವನಿ ಎತ್ತಿದ ನಾಯಕ

ಅಶೋಕ್ ಕುಮಾರ್ ಎನ್
ಕಾನಹೊಸಹಳ್ಳಿ: ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನರಾಮ್ ದೇಶದಲ್ಲಿನ ದೀನ-ದಲಿತರು, ಕಾರ್ಮಿಕರು ಮತ್ತು ತಳ ಸಮುದಾಯದ ಜನರ ಪ್ರಗತಿಗಾಗಿ ನಿರಂತರವಾಗಿ ಹಂಬಲಿಸಿದರು ಎಂದು ಗ್ರಾಪಂ ಮಾಜಿ ಸದಸ್ಯ ಎಂ.ಹೊನ್ನೂರಪ್ಪ ತಿಳಿಸಿದರು.
ಗ್ರಾಮದಲ್ಲಿ ಮಾದಿಗ ದಂಡೋರ ಗ್ರಾಮ ಘಟಕದಿಂದ ಆಯೋಜಿಸಿದ್ದ ಡಾ.ಬಾಬುಜಗಜೀವನ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಬಾಬೂಜಿ ಅವರು ಬದುಕಿನುದ್ದಕ್ಕೂ ದೇಶದ ಕಾರ್ಮಿಕರ ಪರವಾಗಿ ಧ್ವನಿ ಎತ್ತಿ ಅಸಂಖ್ಯಾತ ಕಾರ್ಮಿಕರ ಜೀವನಕ್ಕೆ ಶಕ್ತಿ ತುಂಬಿದರು. ದಲಿತರಾಗಿ ಹುಟ್ಟಿದರೂ ಕೃಷಿ ಕಾರ್ಮಿಕರು ಮತ್ತು ರೈತರ ಪರ ಧ್ವನಿಯಾಗಿದ್ದರು ಎಂದರು.
ಪ್ರಮುಖರಾದ ಚಂದ್ರಪ್ಪ, ರಜನೀಕಾಂತ, ಶಶಿಕುಮಾರ್, ಎಸ್.ಎಂ.ಮಂಜುನಾಥ, ರಾಘವೇಂದ್ರ, ಕರಿಬಸಪ್ಪ, ತಿಪ್ಪೇಶ್, ಮಹಾಂತೇಶ್, ಮಲ್ಲೇಶ್ , ಪೂಜಾರಹಳ್ಳಿ ತಿಪ್ಪೇಸ್ವಾಮಿ, ಶೇಖರಪ್ಪ, ಸಂದೀಪ್ ಇದ್ದರು.