ಕಾಕುಬಾಳುದಲ್ಲಿ ಅದ್ದೂರಿ ಶಾಲಾ ಪ್ರಾರಂಭೋತ್ಸವ ನಿಮಿತ್ತ ಮಕ್ಕಳನ್ನು ಎತ್ತಿನ ಬಂಡಿ ಮೆರವಣಿಗೆ ಮಾಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಗುರುಬಸವರಾಜ, ಶಿಕ್ಷಕರಾದ ಪ್ರಕಾಶ್, ಸರೋಜಾ, ಜರೀನಾ ಬೇಗಂ ಇತರರಿದ್ದರು.
- ವಿಜಯನಗರ ಜಿಲ್ಲೆಯಾದ್ಯಂತ ಶಾಲೆಗಳು ಪುನಾರಂಭ/ ಹೊಸ ಶೈಕ್ಷಣಿಕ ವರ್ಷದ ಸಂಭ್ರಮ
ಹೊಸಪೇಟೆ: ಸುದೀರ್ಘ ಬೇಸಿಗೆ ರಜೆಯ ನಂತರ ಇಂದಿನಿAದ ರಾಜ್ಯಾದ್ಯಂತ ಹೊಸ ಶೈಕ್ಷಣಿಕ ವರ್ಷ ಅಧಿಕೃತವಾಗಿ ಆರಂಭಗೊAಡಿದ್ದು, ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಸಡಗರ-ಸಂಭ್ರಮದಿAದ ಪುನಾರಂಭಗೊAಡಿವೆ. ಶಾಲೆಯ ಮೊದಲ ದಿನವೇ ಜ್ಞಾನದ ದೇಗುಲಕ್ಕೆ ಹೆಜ್ಜೆ ಇಟ್ಟ ವಿದ್ಯಾರ್ಥಿಗಳನ್ನು ಶಾಲಾ ಸಿಬ್ಬಂದಿ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು.
ಬೆನ್ನಿಗೆ ಬ್ಯಾಗ್ ತಗುಲಿಸಿ, ನಗುಮೊಗದಿಂದಲೇ ಶಾಲೆಗೆ ಆಗಮಿಸಿದ ಚಿಣ್ಣರನ್ನು ಶಿಕ್ಷಕ ವೃಂದದವರು ಹೂಗುಚ್ಚಗಳನ್ನು ನೀಡಿ, ಆತ್ಮೀಯವಾಗಿ 'ಗ್ರ‍್ಯಾಂಡ್ ವೆಲ್‌ಕಮ್' ಮಾಡಿದರು. ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ ಮಕ್ಕಳಲ್ಲಿ ಹೊಸ ಉತ್ಸಾಹ ಎದ್ದು ಕಾಣುತ್ತಿತ್ತು. ಶೈಕ್ಷಣಿಕ ವರ್ಷದ ಯಶಸ್ಸಿಗಾಗಿ ಮೊದಲ ದಿನ ಶಾಲಾರಂಭದ ವೇಳೆ ವಿದ್ಯಾ ದೇವತೆಯಾದ ಸರಸ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಹೊಸಪೇಟೆ ವಿವೇಕಾನಂದ ಶಾಲೆಯಲ್ಲಿ ಮಕ್ಕಳಿಗೆ ಅದ್ಧೂರಿಯಾಗಿ ಸ್ವಾಗತಿಸಿದ ಶಿಕ್ಷಕರು. ಮುಖ್ಯಶಿಕ್ಷಕ ಆರ್.ಎಂ.ಸೈದುಸಾಹೇಬ್, ಎನ್.ಎಂ.ವಿಶಾಲಾಕ್ಷಿ, ರೇಣುಕಾಮ್ಮ, ಚೌಡಮ್ಮ, ಶೈನಾಬಿ, ಎಲ್.ಶ್ರೀಕಾಂತ್ ಇತರರಿದ್ದರು.
ವಿದ್ಯಾರ್ಥಿಗಳು ಶಿಕ್ಷಣದ ಮಹತ್ವ ಸಾರುವ ವಿಶಿಷ್ಟ ಪ್ಲೇಕಾರ್ಡ್ಗಳನ್ನು ಹಿಡಿದು ಗಮನ ಸೆಳೆದರು. "ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಿ" ಹಾಗೂ "ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ" ಎಂಬ ಅರ್ಥಗರ್ಭಿತ ಘೋಷಣೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದವು. ಒಟ್ಟಾರೆಯಾಗಿ, ಜಿಲ್ಲೆಯಲ್ಲಿ ಮೊದಲ ದಿನದ ಶಾಲಾ ಚಟುವಟಿಕೆಗಳು ಸಕಾರಾತ್ಮಕ ಹಾಗೂ ಹಬ್ಬದ ವಾತಾವರಣದಲ್ಲಿ ಆರಂಭಗೊAಡಿದ್ದು, ಪೋಷಕರು ಮತ್ತು ಶಿಕ್ಷಕರಲ್ಲಿ ಹೊಸ ಆಶಾವಾದವನ್ನು ಮೂಡಿಸಿದೆ.
ಎತ್ತಿಬಂಡ್ಡಿಯಲ್ಲಿ ಬಂದ ವಿದ್ಯಾರ್ಥಿಗಳು
ತಾಲೂಕಿನ ಕಾಕುಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಮಕ್ಕಳನ್ನು ಕನ್ನಡ ಧ್ವಜ ಹಾಗೂ ಪುಷ್ಪ ನಮನದೊಂದಿಗೆ, ಎತ್ತಿನ ಬಂಡಿ ಮೆರವಣಿಗೆಯ ಮೂಲಕ ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಇದೇ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.92 ಅಂಕ ಗಳಿಸಿದ ಸಾಧಕ ವಿದ್ಯಾರ್ಥಿನಿ ಕುಮಾರಿ ಕೊಟ್ರಮ್ಮಾಳನ್ನು ಗೌರವಿಸಿ ಸನ್ಮಾನಿಸಲಾಯಿತು. ನಂತರ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು.