ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಎಡಬಾಗದಲ್ಲಿರುವ ಮನ್ಮಥ ಹೊಂಡದಲ್ಲಿ ತೆಪ್ಪೊತ್ಸವ ಜರುಗಿತು. 
ವಿಜಯನಗರ

ಹಂಪಿಯಲ್ಲಿ ಸಂಭ್ರಮದ ತೆಪ್ಪೋತ್ಸವ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಫಲಪೂಜಾ ಮಹೋತ್ಸವ ನಿಮಿತ್ತ
  • ಶ್ರೀ ವಿರೂಪಾಕ್ಷೇಶ್ವರ ದೇಗುಲದ ಮನ್ಮಥ ಹೊಂಡದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ
ಹೊಸಪೇಟೆ: ದಕ್ಷಿಣಕಾಶಿ ಹಂಪಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಫಲಪೂಜಾ ಮಹೋತ್ಸವ ನಿಮಿತ್ತ ಗುರುವಾರ ರಾತ್ರಿ ತೆಪ್ಪೋತ್ಸವ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಂಪಿಯಲ್ಲಿ ಫಲಪೂಜೆಯ ಮಹೋತ್ಸವದ ಕಾರ್ಯಕ್ರಮಗಳು ಚಾಲನೆ ನೀಡಲಾಯಿತು. ಧಾರ್ಮಿಕ ವಿಧಾನದಂತೆ ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮೂದಲನೆ ದಿನವಾದ ಗುರು.ವಾರ ರಾತ್ರಿ ಹಂಪಿಯ ವಿದ್ಯಾರಣ್ಯ ಫೀಠದ ಶ್ರೀ ಗಳ ಆಚರಣೆಯ ನೇತೃತ್ವದಲ್ಲಿ ದೇಗುಲ ಎಡಬಾಗದಲ್ಲಿರುವ ಮನ್ಮಥ ಹೊಂಡದಲ್ಲಿ ತೆಪ್ಪೊತ್ಸವ ಜರುಗಿತು. ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ವಿರೂಪಾಕ್ಷನ ಕೃಪೆಗೆ ಪಾತ್ರರಾದರು.
ಪ್ರತೀತಿಯಂತೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಮೂರ್ತಿಯನ್ನ ಹೊತ್ತ ಪಲ್ಲಕ್ಕಿ ಮೆರವಣಿಗೆ ಮೂಲಕ ಮನ್ಮತ ಹೊಂಡಕ್ಕೆ ಬರುತ್ತೆ, ಅಲ್ಲಿಂದ ಪ್ರಾರಂಭವಾದ ತೆಪ್ಪೊತ್ಸವ ಸುಮಾರು ಒಂದು ಘಂಟೆಯ ಕಾಲ ಮನ್ಮಥ ಹೊಂಡದಲ್ಲಿ ಐದು ಬಾರಿ ಸುತ್ತುತ್ತ ನೆರೆದಿದ್ದ ಭಕ್ತರಿಗೆ ದರ್ಶನ ನೀಡುತ್ತೆ, ಇನ್ನು ವಿದೇಶಿಗರು ಕೂಡ ಈ ಉತ್ಸವದಲ್ಲಿ ಬಾಗವಹಿಸಿದ್ದು ವಿಷೇಶವಾಗಿತ್ತು.
ಭಾರತೀಯ ಸಂಸ್ಕೃತಿಯ ಪ್ರತೀಕವಾದ ಈ ಫಲಪೂಜೆಯ ಒಂದು ಅಂಶವಾದ ತೆಪ್ಪೊತ್ಸವವನ್ನ ವಿದೇಶಿಗರು ಪೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ಹಂಪಿ ಕೇವಲ ಪ್ರವಾಸಿ ತಾಣ ಮಾತ್ರವಲ್ಲದೆ ಧಾರ್ಮಿಕ ಕ್ಷೇತ್ರವು ಆಗಿದ್ದು ಇಲ್ಲಿಗೆ ಬಂದಂತ ಪ್ರವಾಸಿಗರಿಗೆ ಈ ತೆಪ್ಪೋತ್ಸವ ಪೂಜಾ ಕಾರ್ಯಕ್ರಮ ತಮಗೆ ಲಭಿಸಿದ ಭಾಗ್ಯ ಎಂದು ಕೊಂಡರು.
ಡಿ.06ರಂದು ಹಂಪಿಯ ವಿರೂಪಾಕ್ಷೇಶ್ವರನ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಶಿವ ಪಾರ್ವತಿಯರ ನಿಶ್ಚಿತಾರ್ಥ ನಡೆಯುವ ಮೂಲಕ ಫಲಪೂಜಾ ಮಹೋತ್ಸವಕ್ಕೆ ತೆರೆ ಬೀಳಲಿದೆ.