- ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ದಿಕ್ಸೂಚಿ
- ವಿದ್ಯಾರ್ಥಿನಿಯರೆ ಮೇಲುಗೈ
- ಹೂವಿನಹಡಗಲಿ ಫಸ್ಟ್
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಉತ್ತಮ ಫಲಿತಾಂಶಕ್ಕಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ನಡೆಸಿರುವ ಪೂರ್ವಸಿದ್ಧತಾ ಮೊದಲ ಪರೀಕ್ಷೆಯಲ್ಲಿ ವಿಜಯನಗರ ಶೇ.92.92 ಫಲೀತಾಂಶ ಸಾಧಿಸಿದೆ. ಮುಂಬರುವ ಮುಖ್ಯ ಪರೀಕ್ಷೆಯಲ್ಲಿ ಕೂಡ ಇನ್ನೂ ಹೆಚ್ಚಿನ ಫಲಿತಾಂಶ ಪಡೆಯುವ ತಯರಿ ನಡೆದಿದೆ.
2023ರಲ್ಲಿ ಶೇ.91.41 ಫಲಿತಾಂಶ ಪಡೆದ ವಿಜಯನಗರ 2024ರಲ್ಲಿ ಶೇ.65.61 ಫಲಿತಾಂಶದಿAದ ರಾಜ್ಯದಲ್ಲಿ 27ನೇ ಸ್ಥಾನಕ್ಕೆ ಕುಸಿದಿತ್ತು. 2025ರಲ್ಲಿ ಶೇ.67.62ರಷ್ಟು ಫಲಿತಾಂಶ ಪಡೆದು 18ನೇ ಸ್ಥಾನ ಏರಿದರು, 2024ರ ಫಲಿತಾಂಶದಿAದ ಕೇವಲ 2 ಅಂಕಿ ಏರಿಕೆ ಕಂಡಿತು. ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಿರುವ ಶಿಕ್ಷಣ ಇಲಾಖೆ ಪೂರ್ವಸಿದ್ಧತಾ ಪರೀಕ್ಷೆಯನ್ನು ಕೂಡ ಮುಖ್ಯ ಪರೀಕ್ಷೆಯಂತೆಯೇ, ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ. ಕಳೆದ ಜ.5ರಿಂದ 10 ವರೆಗೆ ನಡೆದ ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇ.92.92 ಫಲೀತಾಂಶ ಪಡೆದಿದ್ದು, ಮುಖ್ಯ ಪರೀಕ್ಷೆಗೆ ದಿಕ್ಸೂಚಿಯಾಗಿದೆ.
ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ ಹಾಜರಾದ 20,299 ವಿದ್ಯಾರ್ಥಿಗಳ ಪೈಕಿ 18,842 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 1457 ವಿದ್ಯಾರ್ಥಿಗಳು ಪೇಲ್ ಆಗಿದ್ದಾರೆ. ವಿದ್ಯಾರ್ಥಿಗಳು ಶೇ.91.53 ರಷ್ಟು ಫಲಿತಾಂಶ ಪಡೆದರೆ, ಶೇ.94.24ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ. ಹೂವಿನಹಡಗಲಿ ಶೇ.95.18 ಫಲಿತಾಂಶ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದರೆ, ಹೊಸಪೇಟೆ 94.24ರಷ್ಟು ಫಲಿತಾಂಶ ಪಡೆದು ಎರಡನೇ ಸ್ಥಾನ ಪಡೆದಿದೆ. ಕೂಡ್ಲಿಗಿ ಶೇ.93.94, ಹಗರಿಬೊಮ್ಮನಹಳ್ಳಿ ಶೇ.93.17 ಉತ್ತಮ ಫಲಿತಾಂಶ ಪಡೆದರೆ, ಹರಪನಹಳ್ಳಿ ಶೇ.88.02ರಷ್ಟು ಫಲಿತಾಂಶ ಪಡೆದು ಕೊನೆ ಸ್ಥಾನ ಪಡೆದಿದೆ.
ಮುಖ್ಯ ಪರೀಕ್ಷೆಯ ಮಾದರಿಯಲ್ಲಿ ನಡೆಯುತ್ತಿರುವ ಪೂರ್ವಸಿದ್ಧತಾ ಪರೀಕ್ಷೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡುವ ಹೊಣೆ ಜಿಲ್ಲಾ ಉಪನಿರ್ದೇಶಕರದ್ದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ಮತ್ತಿತರ ಪ್ರಕರಣಗಳು ಪತ್ತೆಯಾದರೆ ಕಠಿಣ ಕ್ರಮದ ಎಚ್ಚರಿಕೆ ವಹಿಸಲಾಗಿದೆ. ಕೆಎಸ್‌ಇಎಬಿಯ ವೇಳಾಪಟ್ಟಿಯಂತೆ ಇನ್ನು ಎರಡನೇ ಪರೀಕ್ಷೆ ಜ.27ರಿಂದ ಸೋಮವಾರದ ವರೆಗೆ ನಡೆದಿದೆ ಫಲಿತಾಂಶ ಬಾಕಿ ಇದರ. ಫೆ.23ರಿಂದ 28 ವರೆಗೆ ಮೂರನೇ ಪೂರ್ವಸಿದ್ಧತಾ ಪರೀಕ್ಷೆ ನಡೆಯಲಿದೆ.
ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ
ಮುರು ಪೂರ್ವ ಸಿದ್ದತಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಹೊಸ ರೀತಿಯ ವ್ಯವಸ್ಥೆಯಲ್ಲಿ ನಡೆಯುತ್ತಿವೆ. ಪರೀಕ್ಷೆ ವೆಬ್ ಕಾಸ್ಟಿಂಗ್ ಅಡಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಬದಲಾಗಿರುವ ಪಾಸಿಂಗ್ ಅಂಕ ವ್ಯವಸ್ಥೆ, ಮೂರು ಪರೀಕ್ಷೆಗಳಿಂದ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸುವ ನಿರೀಕ್ಷೆಯನ್ನು ಇಲಾಖೆ ಹೊಂದಿದೆ. ಹಿಂದುಳಿದ ಮತ್ತು ಕಲಿಕೆಯಲ್ಲಿ ನಿಧಾನಗತಿಯ ವಿದ್ಯಾರ್ಥಿಗಳಿಗೆ ಸತತ ಪರೀಕ್ಷೆಗಳಿಂದ ಅನುಕೂಲವಾಗಲಿದೆ.
ಶಾಲೆಯಲ್ಲೆ ಮೌಲ್ಯಮಾಪನ
ರಾಜ್ಯ ಪಠ್ಯಕ್ರಮ ಅನುಸರಿಸುವ ವಿದ್ಯಾರ್ಥಿಗಳು ಆಂತರಿಕ ಅಂಕಗಳೂ ಸೇರಿ ಒಟ್ಟಾರೆ ಶೇ 33 ಅಂಕ ಪಡೆದರೂ ತೇರ್ಗಡೆಯಾಗುತ್ತಾರೆ. ಪ್ರತಿ ವಿಷಯಕ್ಕೂ 20 ಆಂತರಿಕ ಅಂಕಗಳಿದ್ದು, 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಎರಡೂ ಸೇರಿ 100ಕ್ಕೆ ಕನಿಷ್ಠ 33 ಅಂಕ ಪಡೆದವರು ಉತ್ತೀರ್ಣರಾಗುತ್ತಾರೆ. ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ 20 ಆಂತರಿಕ ಅಂಕ ಪಡೆದರೆ, ಲಿಖಿತ ಪರೀಕ್ಷೆಯಲ್ಲಿ 13 ಬಂದರೂ ಸಾಕು ಆ ವಿಷಯದಲ್ಲಿ ತೇರ್ಗಡೆಯಾಗುತ್ತಾನೆ. ಇದರಂತೆ ವಿಜಯನಗರ ಜಿಲ್ಲೆಯಲ್ಲಿ ಶೇ.6.66ರಷ್ಟು ವಿದ್ಯಾರ್ಥಿಗಳಿಗೆ ಗ್ರೇಡ್ ಎ+ ಬಂದರೆ, ಶೇ.12.36 ರಷ್ಟು ವಿದ್ಯಾರ್ಥಿಗಳು ಗ್ರೇಡ್ ಎ ಪಡೆದಿದ್ದಾರೆ. ಶೇ14.16ರಷ್ಟು ಗ್ರೇಡ್ ಬಿ+ ಬಂದರೆ, ಶೇ.16.49ರಷ್ಟು ಗ್ರೇಡ್ ಬಿ ಬಂದಿದೆ. ಇನ್ನು ಶೇ.18.36ರಷ್ಟು ವಿದ್ಯಾರ್ಥಿಗಳು ಗ್ರೇಡ್ ಸಿ+ ಬಂದರೆ, ಶೇ.24.55ರಷ್ಟು ವಿದ್ಯಾರ್ಥಿಗಳು ಗ್ರೇಡ್ ಸಿ ಫಲಿತಾಂಶ ಪಡೆದಿದ್ದಾರೆ. ಮುಖ್ಯ ಪರೀಕ್ಷೆಯ ಮಾದರಿಯಲ್ಲಿ ಪೂರ್ವಸಿದ್ಧತಾ ಪರೀಕ್ಷೆ ನಡೆದರೂ, ಶಾಲೆಯಲ್ಲೆ ಮೌಲ್ಯಾಮಾಪನ ನಡೆದಿದೆ. ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ ಮೌಲ್ಯಾಮಾಪನ ನಡೆದಿದೆ ಎಂದು ಮುಖ್ಯ ಪರೀಕ್ಷೆಯಲ್ಲಿ ಶಿಕ್ಷಕರ ಮೌಲ್ಯಾ ತಿಳಿಯಲಿದೆ.
ಮೂರು ಪ್ರಿಪೆರೇಟರಿ ಪರೀಕ್ಷೆ ನಡೆಯಲಿದೆ. ಇದರಲ್ಲಿ ನಡೆದ ಮೊದಲ ಪ್ರಿಪರೇಟರಿಯಲ್ಲಿ ಶೇ.92.92ರಷ್ಟು ಫಲಿತಾಂಶ ಬಂದಿದೆ. ಮುಖ್ಯ ಪರೀಕ್ಷೆಯ ಮಾದರಿಯಲ್ಲಿ ಪಾರದರ್ಶಕವಾಗಿ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗಿದೆ. ಶಾಲೆಯಲ್ಲಿ ಮೌಲ್ಯಮಾಪನ ನಡೆದಿದೆ. ಮುಂದಿನ ಮುಖ್ಯ ಪರೀಕ್ಷೆಯಲ್ಲಿ ಇದೇ ಫಲಿತಾಂಶ ಪಡೆಯುವ ಗುರಿಯಾಗಿದೆ.