ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಹೊಲಗಳಲ್ಲಿ ಪತ್ತೆಯಾದ ಜೀನಮೂರ್ತಿ. 
ವಿಜಯನಗರ

ಕೋಳೂರಲ್ಲಿ 4 ಜೀನಮೂರ್ತಿಗಳು ಪತ್ತೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ವಿಜಯನಗರ ತಿರುಗಾಟ ಸಂಶೋಧನಾ ತಂಡ ಕ್ಷೇತ್ರಕಾರ್ಯ
  • ಸಲ್ಲೇಖನ ವ್ರತ ಬಿಂಬಿಸುವ 4 ಜಿನಮೂರ್ತಿ ಶಿಲ್ಪಗಳು

ಕುರುಗೋಡು: ಕೋಳೂರು ಗ್ರಾಮದ ಜಮೀನುಗಳಲ್ಲಿ ವಿಜಯನಗರ ತಿರುಗಾಟ ಸಂಶೋಧನಾ ತಂಡ ಮಂಗಳವಾರ ನಡೆಸಿದ ಕ್ಷೇತ್ರಕಾರ್ಯದಲ್ಲಿ ಸಲ್ಲೇಖನ ವ್ರತ ಬಿಂಬಿಸುವ 4 ಜಿನಮೂರ್ತಿ ಶಿಲ್ಪಗಳು ಪತ್ತೆಯಾಗಿವೆ.

ಗ್ರಾಮದ ಸೂರ್ಯನಾರಾಯಣ ದೇವಾಲಯದಲ್ಲಿದ್ದ ಕಲ್ಯಾಣ ಚಾಲುಕ್ಯರ ಕಾಲದ ಶಾಸನದಲ್ಲಿ ನಂದ ಮತ್ತು ಮೌರ್ಯ ಸಾಮ್ರಾಜ್ಯಗಳ ಉಲ್ಲೇಖವಿವೆ. ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾದ 5-7 ಅಡಿ ಎತ್ತರದ ಶಿಲ್ಪ ಜಿನಬಿಂಬದ ಮುಕ್ಕೊಡೆ ಕೆಳಗೆ ಪದ್ಮಾಸನ ಭಂಗಿಯಲ್ಲಿದೆ. ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ತಳಭಾಗದಲ್ಲಿ ಹಸು ಮತ್ತು ಖಡ್ಗದ ಚಿತ್ರಗಳಿವೆ. ಯಾವುದೇ ಲಿಪಿ ಇರದ ಈ ಮೂರ್ತಿಯನ್ನು ಗ್ರಾಮಸ್ಥರು ವೀರಭದ್ರ, ಖಾಜಾಪೀರ, ದೊಡ್ಡ ಸಂಕ್ರಮ್ಮ ಹಾಗೂ ಸಣ್ಣ ಸಂಕ್ರಮ್ಮ ಎಂಬ ವಿಭಿನ್ನ ಹೆಸರಿಂದ ಪೂಜಿಸುತ್ತಿದ್ದಾರೆ.
ಇದರಿಂದ ಈ ಭಾಗದಲ್ಲಿ ಮೌರ್ಯರ ಕಾಲದಲ್ಲೇ ಜೈನ ಧರ್ಮ ಪ್ರಸಾರವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಮೂರ್ತಿಯನ್ನು ರಕ್ಷಿಸಿ, ಸಂಬಂಧಿಸಿದ ಇಲಾಖೆ ಶೀಘ್ರ ಉತ್ಖನನ ನಡೆಸಬೇಕು ಎಂದು ಸಂಶೋಧಕರು ಆಗ್ರಹಿಸಿದ್ದಾರೆ. ಸಂಶೋಧಕರಾದ ಪ್ರೊ.ಎಚ್.ತಿಪ್ಪೇಸ್ವಾಮಿ, ಡಾ.ಗೋವಿಂದ, ಡಾ. ಕೃಷ್ಣೇಗೌಡ ಇತರರಿದ್ದರು.