cartoon 
ವಿಜಯನಗರ

ಭಿಕ್ಷಾಟನೆ ಮಾಡುತ್ತಿದ್ದ 3 ಮಕ್ಕಳ ರಕ್ಷಣೆ

ಮಂಜುನಾಥ
ಹೊಸಪೇಟೆ: ಮಕ್ಕಳ ರಕ್ಷಣಾ ಘಟಕ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಕ್ಕ ಪಡೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ನಗರದಲ್ಲಿ ಪುಸ್ತಕ ಮಾರಾಟದ ನೆಪದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ 3 ಮಕ್ಕಳು ಹಾಗೂ 3 ಜನ ತಾಯಂದಿರನ್ನು ರಕ್ಷಿಸಿದ್ದಾರೆ.
ನಗರದ ಡಾ. ಪುನೀತ್ ರಾಜಕುಮಾರ್ ವೃತ್ತದಲ್ಲಿ ಜೋಳಿಗೆ ಹಾಕಿಕೊಂಡು, ಪುಸ್ತಕ ಮಾರಾಟ ಮಾಡುವ ನೆಪದಲ್ಲಿ ಈ ಮಹಿಳೆಯರು ಮಕ್ಕಳೊಂದಿಗೆ ಭಿಕ್ಷಾಟನೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇವರನ್ನು ರಕ್ಷಿಸಿದ್ದಾರೆ. ರಕ್ಷಣೆಗೊಳಗಾದವರು ಮೂಲತಃ ಬಳ್ಳಾರಿಯ ಗುಡಾರ ನಗರ, ಕೊಪ್ಪಳ ಮತ್ತು ಕಾರಟಗಿ ತಾಲೂಕಿನ ಸಿದ್ದಾಪುರ ಮೂಲದವರೆಂದು ಗುರುತಿಸಲಾಗಿದೆ.
ನಗರ ಸೇರಿದಂತೆ ನಾನಾ ಕಡೆಗಳಲ್ಲಿ ನಿರಂತರವಾಗಿ ಮಕ್ಕಳ ಭಿಕ್ಷಾಟನೆ ನಡೆಯುತ್ತಿದೆ. ಕಣ್ಣೆದುರೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಸಂಬAಧಪಟ್ಟ ಇಲಾಖೆಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿವೆ. ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ರಕ್ಷಿಸಲಾದ ತಾಯಿ-ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಮುಂದಾಗಿದ್ದು, ಭಿಕ್ಷಾಟನೆ ದಂಧೆಯ ಹಿಂದಿರುವ ಜಾಲದ ಪತ್ತೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.