ಜಿಲ್ಲೆ

ಜುಲೈ 28ರಂದು ಕೃಷ್ಣೇಂದ್ರ ಸಮರ್ಥ್ ಗಾಯನ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ವಿಜಯನಗರ ಸಂಗೀತ ಸಭಾ ಟ್ರಸ್ಟ್ ಜುಲೈ 28ರಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.

ವಿ.ಕೃಷ್ಣೇಂದ್ರ ಸಮರ್ಥ್ ಗಾಯನ ಪ್ರಸ್ತುತಪಡಿಸಲಿದ್ದು, ವಿ.ಪ್ರಹ್ಲಾದ್ ದೇಶಪಾಂಡೆ ತಬಲದಲ್ಲಿ ಹಾಗೂ ವಿ.ಸೂರ್ಯ ಉಪಾಧ್ಯಾಯ ಹಾರ‌್ಮೋನಿಯಂನಲ್ಲಿ ಸಹಕಾರ ನೀಡುವರು.

ವಿಜಯನಗರ ಮಾರುತಿ ಮಂದಿರ ಸಭಾಂಗಣದಲ್ಲಿ ಸಂಜೆ 5.45ರಿಂದ 8.15ರ ವರೆಗೆ ಕಾರ್ಯಕ್ರಮ ಇರಲಿದ್ದು, ಆಸಕ್ತರು ಪಾಲ್ಗೊಳ್ಳುವಂತೆ ವಿಜಯನಗರ ಸಂಗೀತ ಸಭಾ ಟ್ರಸ್ಟ್‌ನ ಧರ್ಮದರ್ಶಿ ಹಾಗೂ ಸದಸ್ಯರು ಕೋರಿದ್ದಾರೆ.