ಹೊಸಪೇಟೆಯಲ್ಲಿ ಸಚಿವ ಆನಂದ ಸಿಂಗ್‌ಗೆ ಪುನೀತ್ ಅಭಿಮಾನಿಗಳು ಶುಕ್ರವಾರ ಮನವಿ ಸಲ್ಲಿಸಿದರು.  
ಜಿಲ್ಲೆ

ವಿಜಯನಗರ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್ ಹೆಸರು: ಅಭಿಮಾನಿಗಳ ಮನವಿಗೆ ಸಚಿವ ಆನಂದ ಸಿಂಗ್ ಭರವಸೆ

ಹೊಸಪೇಟೆ: ನೂತನ ವಿಜಯನಗರ ಜಿಲ್ಲಾ ಕ್ರೀಡಾಂಗಣ, ನಗರದ ಪ್ರಮುಖ ವೃತ್ತಕ್ಕೆ ನಟ ಪುನೀತ್ ರಾಜಕುಮಾರ್ ಹೆಸರಿಡಬೇಕೆಮದು ಅಭಿಮಾನಿಗಳು ಶುಕ್ರವಾರ ಸಚಿವ ಆನಂದ ಸಿಂಗ್‌ಗೆ ಮನವಿ ಸಲ್ಲಿಸಿದರು.

ನಟ ಪುನೀತ್ ಹೊಸಪೇಟೆ ನಗರದೊಂದಿಗೆ ವಿಶೇಷ ನಂಟು ಹೊಂದಿದ್ದರು. ಅಪಾರ ಅಭಿಮಾನಿಗಳ ಬಳಗವನ್ನು ಸಹ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ನಗರಸಭೆ ವ್ಯಾಪ್ತಿಯಲ್ಲಿನ ಪ್ರಮುಖ ವೃತ್ತ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಸಚಿವ ಆನಂದ ಸಿಂಗ್, ಪುನೀತ್ ಅವರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಪುನೀತ್ ನೆನಪಿನಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಹೆಸರು ನಾಮಕರಣ ಮಾಡಲಾಗುವುದು. ತಹಸಿಲ್ ಕಚೇರಿ ಹತ್ತಿರದ ವೃತ್ತಕ್ಕೆ ಹೆಸರು ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.