ಕಂಪ್ಲಿಯ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ರೈತ ಸಂಘದ ಹಿರಿಯ ಸದಸ್ಯ ಕೆ.ಚಂದ್ರಶೇಖರ್ ಮಾತನಾಡಿದರು. ಜೆಇ ವೀರಭದ್ರಯ್ಯಸ್ವಾಮಿ, ರೈತರಾದ ಮಣ್ಣೂರು ನವೀನ್, ಅಯ್ಯೋದಿ ವೆಂಕಟೇಶ್, ನಾಯಕರ ಪಾಂಡುರಂಗಪ್ಪ ಇತರರಿದ್ದರು. 
ಜಿಲ್ಲೆ

ಕಾಲುವೆ ಕಾಮಗಾರಿ ಕೈಗೊಳ್ಳಲು ಒಪ್ಪಿಗೆ ನೀಡಿ

ಕಂಪ್ಲಿ: ವಿಜಯನಗರ ಕಾಲುವೆಯ 0ಕಿ.ಮೀ.ಯಿಂದ 8.60ಕಿ.ಮೀ.ತನಕದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ರೈತರ ಒಪ್ಪಿಗೆ ಬೇಕಾಗಿದೆ. ಈ ಕಾಮಗಾರಿಯಿಂದ ಕೃಷಿಕರಿಗೆ ಅನುಕೂಲವಾಗಲಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಜೆಇ ವೀರಭದ್ರಯ್ಯಸ್ವಾಮಿ ಹೇಳಿದರು.

ಕಾಮಗಾರಿ ಪೂರ್ಣಗೊಳಿಸಲು ಎಂಟು ತಿಂಗಳು

ಪಟ್ಟಣದ ಕೋಟೆಯ ಪಂಪಾಪತಿ ದೇವಸ್ಥಾನದ ಆವರಣದಲ್ಲಿ ಗುರುವಾರ ನೀರಾವರಿ ಇಲಾಖೆ ಅಧಿಕಾರಿಗಳ ರೈತರ ಸಭೆಯಲ್ಲಿ ಮಾತನಾಡಿದರು.
ಕಾಲುವೆ ಅಭಿವೃದ್ಧಿ ಕಾಮಗಾರಿಯ ಅವಧಿ 2024ರ ಮಾರ್ಚ್‌ನಲ್ಲಿ ಅಂತ್ಯಗೊಳ್ಳಲಿದೆ. ಅಷ್ಟರೊಳಗೆ ಸದ್ಯ ಬಾಕಿ ಇರುವ ಕಾಶಿಭಾವಾಜಿ ಮಠದಿಂದ ವಿಜಯನಗರ ಆಣೆಕಟ್ಟಿನತನಕ ಕಾಲುವೆ ಕಾಮಗಾರಿ ಕೈಗೊಳ್ಳಬೇಕಿದೆ. ಇದಕ್ಕೆ ಎಂಟು ತಿಂಗಳು ಬೇಕಾಗುತ್ತದೆ. ರೈತರು ಕಾಲುವೆ ಕಾಮಗಾರಿ ಕೈಗೊಳ್ಳಲು ಒಪ್ಪಿಗೆ ನೀಡಬೇಕಾಗಿದೆ. ನೀರು ಬಳಕೆದಾರರ ಸಂಘಗಳ ವ್ಯಾಪ್ತಿಯ ರೈತರು ಸದಸ್ಯತ್ವ ಶುಲ್ಕ ಪಾವತಿಸಿ ಕಡ್ಡಾಯವಾಗಿ ಸದಸ್ಯರಾಗಬೇಕು. ಬೆಳೆ ಮತ್ತು ನೀರಿನ ಕರವನ್ನು ತಹಸೀಲ್ದಾರ್ ಕಚೇರಿಗೆ ಪಾವತಿಸುವ ಬದಲಿಗೆ ನೀರು ಬಳಕೆದಾರರ ಸಂಘಕ್ಕೆ ಪಾವತಿಸಬೇಕು ಎಂದರು.

ಇದನ್ನೂ ಓದಿ:

ರೈತ ಸಂಘದ ಹಿರಿಯ ಸದಸ್ಯ ಕೆ.ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ಬಾಳೆ, ಕಬ್ಬು ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಎಂಟು ತಿಂಗಳು ನೀರು ಸ್ಥಗಿತಗೊಂಡರೆ ಪುನಹ ರೈತರು ಬಾಳೆ ಬೆಳೆಯನ್ನು ಪಡೆಯಲು ಮೂರೂವರೆ ವರ್ಷ ಕಾಯಬೇಕಾಗುತ್ತದೆ. ಇದರಿಂದ ರೈತರ ಬದುಕಿಗೆ ತೊಂದರೆಯಾಗುತ್ತದೆ. ಮೊದಲು ವಿಜಯನಗರ ಆಣೆಕಟ್ಟು ಬಲವರ್ಧಿಸುವ ಕಾಮಗಾರಿ, ಮುಖ್ಯ ಕಾಲುವೆ ಸರ್ವೀಸ್ ರಸ್ತೆ, ಮಾಗಾಣಿ ರಸ್ತೆಗಳು, ಎಸ್ಕೇಪ್, ಮಡಿಗಾಲುವೆಗಳನ್ನು ಅಭಿವೃದ್ಧಿಪಡಿಸಬೇಕು. ನೀರಾವರಿ ನಿಗಮದ ಎಲ್ಲ ಅಧಿಕಾರಿಗಳು ಕಂಪ್ಲಿ ಕೇಂದ್ರಸ್ಥಾನದಲ್ಲಿ ವಾಸಿಸಬೇಕು. ರೈತರ ಕಡೆ ಅಂಚಿನ ಭೂಮಿಗೂ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಎಂಟು ತಿಂಗಳು ಕಾಲುವೆ ಅಭಿವೃದ್ಧಿಗೆ ಒಪ್ಪುವುದಿಲ್ಲ. ಯೋಜನಾ ಅವಧಿಯನ್ನು ಮುಂದಕ್ಕೆ ವಿಸ್ತರಿಸಬೇಕು. ನೀರು ಮತ್ತು ಬೆಳೆ ಕರಗಳನ್ನು ನೀರು ಬಳಕೆದಾರರ ಸಂಘಕ್ಕೆ ಪಾವತಿಸುವಂತೆ ತಹಸೀಲ್ದಾರ್ ಅವರು ರೈತರ ಸಭೆ ಕರೆದು ಸೂಚಿಸಲಿ ಎಂದರು.

ರೈತ ಸಂಘದ ಅಧ್ಯಕ್ಷ ನವೀನ್ ಮಣ್ಣೂರು, ಸದಸ್ಯರಾದ ಕಟ್ಟೆ ಮಾರೆಪ್ಪ, ಅದ್ದಪ್ಪ ನಾಗಲಾರೆಪ್ಪ, ಅಯ್ಯೋದಿ ವೆಂಕಟೇಶ್, ನಾಯಕರ ಪಾಂಡುರಂಗಪ್ಪ, ಭೂಪಾಲ್ ಗೋವಿಂದರಾಜ, ಅಲಬನೂರು ಬಸವರಾಜ, ಲಡ್ಡು ಹೊನ್ನೂರ್‌ವಲಿ, ಗೊಂದಿ ಮಂಜುನಾಥ, ಪುಟ್ಟಿ ಬಸವನಗೌಡ, ಡಾ.ವಿಜಯಾನಂದ, ಬಾಗಲಿ ಮಂಜುನಾಥ ಸೇರಿ ರೈತರು, ಗುತ್ತಿಗೆ ಕಂಪನಿಯ ಅಧಿಕಾರಿಗಳಾದ ರಾಜೇಶ್, ಅನಿಲ್, ಅರವಿಂದ್, ಬಾಲಕೃಷ್ಣ, ವೆಂಕಟೇಶ್ ಇತರರಿದ್ದರು.