ಜಿಲ್ಲೆ

ಕೋಟೆ ನಗರಿಯ ಬೆಳ್ಳಿ ತೆರೆಯಲ್ಲಿ ರಾರಾಜಿಸಿದ ವಿಜಯಾನಂದ

Chitradurga

ಚಿತ್ರದುರ್ಗ: ಕನ್ನಡದ ಮೊದಲ ಬಯೋಪಿಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಿರತ ವಿಜಯಾನಂದ ಸಿನಿಮಾ ಶುಕ್ರವಾರ ಬೆಳಗ್ಗೆ ಕೋಟೆ ನಗರಿ ಚಿತ್ರದುರ್ಗದ ಪ್ರಸನ್ನ ಚಿತ್ರ ಮಂದಿರದ ಬೆಳ್ಳಿ ತೆರೆ ಮೇಲೆ ರಾರಾಜಿಸಿತು. ಈ ವೇಳೆ ಅಭಿಮಾನಿ ಗಳು ಕೇಕ್ ಕತ್ತರಿಸಿ ಸಿನಿಮಾಕ್ಕೆ ಶುಭ ಕೋರಿದರು. ವಿಜಯ ಸಂಕೇಶ್ವರ ಅವರಿಗೆ ಹಾಗೂ ಸಿನಿಮಾಕ್ಕೆ ಶುಭವಾಗಲಿ ಎಂದು ಜೈ ಘೋಷ ಕೂಗಿದರು.

ಜೀವಾನಾಧರಿತ ಸಿನಿಮಾ ಅತ್ಯುತ್ತಮವಾಗಿ ಹೊರಹೊಮ್ಮಿದೆ ಎಂದು ಮಲ್ಲಿಕಾರ್ಜುನ್ ಎಂಬುವವರು ಹೇಳಿದರೆ,ವಿದ್ಯಾರ್ಥಿ ಧನು ಷ್ ಸಿನಿಮಾ ಯುವಕರಿಗೆ ಸ್ಫೂರ್ತಿ ಕೊಡುವಂತಿದೆ ಎಂದರು. ಗುರುಮೂರ್ತಿ ಎಂಬುವರು ಸಿನಿಮಾ ಸಾರಿದ ಸಂದೇಶ ಚೆನ್ನಾಗಿದೆ ಎಂದರು. ಕೇವಲ ದುಡ್ಡು ಮಾಡುವುದೇ ಜೀವನ ಅಲ್ಲ. ಪ್ರಾಮಾಣಿಕವಾಗಿ ಹೇಗೆ ಜೀವನವನ್ನು ಕಟ್ಟಿಕೊಳ್ಳ ಬೇಕೆಂಬ ಎಂದು ತಿಳಿಸುವುದರೊಂದಿಗೆ ಉತ್ತಮ ಮೌಲ್ಯಗಳನ್ನು ಸಾರಿದೆ ಎಂದರು.

ಲಾರಿ ಮಾಲೀಕ ನನಗೂ ಕುತೂಹಲ ಇತ್ತು, ವಿಜಯ ಸಂಕೇಶ್ವರ ಅವರ ಉದ್ಯಮ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾ ರೈಸಿದರು. ಆನಂತ್‌ನಾಗ್, ಪ್ರಕಾಶ್ ಬೆಳ ವಾಡಿ,ರವಿಚಂದ್ರನ್,ವಿನಯಾ ಪ್ರಸಾದ್,ನಿಹಾಲ್,ಸಿರಿ ಪ್ರಹ್ಲಾದ್,ಭರತ್ ಭೂಪಣ್ಣ,ರಮೇಶ್‌ಭಟ್, ಶೈನ್‌ಶೆಟ್ಟಿ,ಅರ್ಚನಾ ಕೊಟ್ಟಿಗೆ,ದಯಾಳ್ ಪದ್ಮನಾಭನ್ ಮತ್ತಿತರ ದಿಗ್ಗಜರಿರುವ ವಿಆರ್‌ಎಲ್ ಪ್ರೊಡಕ್ಷನ್‌ನ ಚೊಚ್ಚಲ ಸಿನಿಮಾದ,ರಿಷಿಕಾ ಶರ್ಮಾ ನಿರ್ದೇಶಿರುವ ಈ ಸಿನಿಮಾದ ಛಾಯಾ ಗ್ರಹಣ,ಸಂಗೀತ ಸಿನಿಕಥೆ,ಸಂಗೀತವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರ ವಾಯಿತು.